ಮುಂಡುಗೋಡಿನಲ್ಲಿ ಭಾರಿ ಬಿರುಗಾಳಿ ಮಳೆ : ಲಕ್ಷಾಂತರ ರೂಪಾಯಿ ನಷ್ಟ…

ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನಾದ್ಯಂತ ಭಯಂಕರ ಬಿರುಗಾಳಿ ಮಳೆ ಸುರಿದಿದ್ದು, ಮನೆ,ತೋಟಗಳು ನೆಲಸಮಗೊಂಡು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.  ಜಿಲ್ಲೆಯ ಮುಂಡಗೋಡು ತಾಲೂಕಿನ ಮುಳವಳ್ಳಿಯಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಹತ್ತಕ್ಕೂ ಹೆಚ್ಚು ಮನೆಗಳ ಚಾವಡಿ ಹಾರಿಹೋಗಿದ್ದಲ್ಲದೆ,
ಮಂಜುನಾಥ್ ಎಂಬುವವರ ಕೋಳಿ ಫಾರಮ್ ಸಂಪೂರ್ಣ ನಾಶವಾಗಿವೆ. ಫಾರಂ‌ನಲ್ಲಿದ್ದ ನೂರಾರು ಕೋಳಿಗಳು ಸತ್ತಿವೆ. ಇದಲ್ಲದೇ ಮಾವಿನ ತೋಟ ,ಅಡಕೆ,ಬಾಳೆ ತೋಟಗಳಿಗೂ ಹಾನಿಯಾಗಿದ್ದು ವಿದ್ಯುತ್ ತಂತಿಗಳು ನೆಲಕ್ಕುರಿಳಿವೆ. ಸ್ಥಳಕ್ಜೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ  ನೆಡೆಸಿದ್ದಾರೆ.⁠⁠⁠⁠

One thought on “ಮುಂಡುಗೋಡಿನಲ್ಲಿ ಭಾರಿ ಬಿರುಗಾಳಿ ಮಳೆ : ಲಕ್ಷಾಂತರ ರೂಪಾಯಿ ನಷ್ಟ…

Comments are closed.

Social Media Auto Publish Powered By : XYZScripts.com