ಬಿಜೆಪಿ ಕಾರ್ಯಕರ್ತರಿಂದಲೇ ಫ್ಲೆಕ್ಸ್‌ ತೆರವು : ಮುಸುಕಿನ ಗುದ್ದಾಟಕ್ಕೆ ಕಾರಣವಾಯ್ತು ಫ್ಲೆಕ್ಸ್‌…

ಮೈಸೂರು: ಮೈಸೂರಿನಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗಾಗಿ ಮೈಸೂರಿನೆಲ್ಲೆಡೆ ಹಾಕಿದ್ದ ಫ್ಲೆಕ್ಸ್‌ನ್ನ ಸ್ವತಃ ಬಿಜೆಪಿ ಕಾರ್ಯಕರ್ತರೇ ತೆರವು ಮಾಡಿದ್ದಾರೆ.  ಫ್ಲೆಕ್ಸ್ ಗಳನ್ನು ಏಕಾಏಕಿ ಹೊತ್ತೊಯ್ದ ಬಿಜೆಪಿ ಕಾರ್ಯಕರ್ತರು ಪುನಃ ಹಲವು ಅನುಮಾನಗಳನ್ನ ಹುಟ್ಟುಹಾಕಿದ್ದಾರೆ.
ಈ ಪ್ಲೆಕ್ಸ್‌ಗಳಲ್ಲಿ ಮೋದಿ, ಅಮಿತ್ ಷಾ ಭಾವಚಿತ್ರದ ಜೊತೆ ಈಶ್ವರಪ್ಪ ಬಿಎಸ್‌ವೈ ಭಾವಚಿತ್ರವನ್ನೂ ಹಾಕಲಾಗಿದ್ದು, ಎಲ್ಲ ಪ್ಲೆಕ್ಸ್‌ಗಳಲ್ಲಿ ‘ಸಂತೋಷ’ ಎಂಬ ಪದ ಬಳಕೆ ಮಾಡಲಾಗಿತ್ತು.‘ಸಂತೋಷವಿದ್ದರೆ ಜಯ, ಜಯಕ್ಕೆ ಸಂತೋಷವೇ ಸೂತ್ರ’ ಎಂಬ ನುಡಿಯನ್ನ ಎಲ್ಲ ಫ್ಲೆಕ್ಸ್‌ಗಳಲ್ಲಿ ಉಲ್ಲೇಖಿಸಲಾಗಿತ್ತು.  ಇದೇ ಕಾರಣಕ್ಕೆ ಒಂದು ಬಣದ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್‌ಗಳನ್ನ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಪ್ಲೆಕ್ಸ್‌ಗಳ ಬರಹದಲ್ಲಿಯೂ ಭಿನ್ನಾಭಿಪ್ರಾಯ ಹುಡುಕಿರುವ ಬಿಜೆಪಿ ಕಾರ್ಯಕರ್ತರು, ಫ್ಲೆಕ್ಸ್‌ಗಳನ್ನೇ ತೆರವುಗೊಳಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪರೊಂದಿಗೆ ಗುರುತಿಸಿಕೊಂಡಿರುವ ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಹೆಸರು ಸೂಚ್ಯವಾಗಿ ಫ್ಲೆಕ್ಸ್‌ನಲ್ಲಿ ಬಳಕೆಯಾಗಿದೆ ಎಂಬ ವಿಷಯಕ್ಕೆ ಫ್ಲೆಕ್ಸ್‌ನ್ನ ಕಾರ್ಯಕರ್ತರು ಹೊತ್ತೊಯ್ದಿರಬಹುದು ಎಂಬ ಅನುಮಾನಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

Comments are closed.

Social Media Auto Publish Powered By : XYZScripts.com