ವಿಪ್ರೋ ಸಂಸ್ಥೆಗೆ ಅನಾಮಧೇಯ ಪತ್ರ : ರಾಸಾಯನಿಕ ಸಿಂಪಡಿಸಿ ಕೊಲೆ ಮಾಡುವ ಬೆದರಿಕೆ…

ಬೆಂಗಳೂರು:  ರಾಜ್ಯದ ಪ್ರತಿಷ್ಠಿತ ಐಟಿ ಸಂಸ್ಥೆ ವಿಪ್ರೋ ಕಂಪನಿಗೆ ಅನಾಮಧೇಯ ಈ ಮೇಲ್‌ ಪತ್ರದ ಮೂಲಕ ದುಷ್ಕರ್ಮಿಗಳು ಬೆದರಿಕೆ ಒಡ್ಡಿದ್ದು,  ಸರ್ಜಾಪುರದಲ್ಲಿರುವ ವಿಪ್ರೋ ಸಂಸ್ಥೆಗೆ ಈ ಮೇಲ್ ಬಂದಿದೆ.  500 ಕೋಟಿ ಹಣವನ್ನು ಬಿಟ್ ಕಾಯಿನ್ ಮೂಲಕ ನೀಡುವಂತೆ ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳು,  ೨೦ ದಿನಗಳ ಒಳಗೆ ಹಣವನ್ನು ನೀಡದಿದ್ದಲ್ಲಿ ದಾಳಿ ಮಾಡುತ್ತೇವೆ ಎಂದು ಪತ್ರದಲ್ಲಿ ಬೆದರಿಸಿದ್ದಾರೆ.  ಮೇ ೨೫ ರ ಒಳಗೆ ಹಣ ನೀಡುವಂತೆ ಗಡವು ನೀಡಿದ್ದು, ವಿಪ್ರೋ ಸಂಸ್ಥೆಯ ಆಡಳಿತಾಧಿಕಾರಿಗಳು ಭಯಭೀತರಾಗಿದ್ದಾರೆ. ಬೆದರಿಕೆಯ ಈ ಮೇಲ್ ramesh2@protomail.com ಎಂಬ ಮೇಲ್ ಐಡಿಯಿಂದ ಬಂದಿದ್ದು, ಈ ಸಂಬಂಧ ಸೈಬರ್ ಕ್ರೈಮ್ ಮತ್ತು ಸಿಸಿಬಿಗೆ ವಿಪ್ರೋ ದೂರು ದಾಖಲಿಸಿದೆ.
Nicin ಎಂಬ ಪದಾರ್ಥದ ಮೂಲಕ ದಾಳಿ ಮಾಡುತ್ತೇವೆ ಎಂದು ಅನಾಮಧೇಯ ದುಷ್ಕರ್ಮಿ ಬೆದರಿಸಿದ್ದು, Nicin ರಾಸಾಯನಿಕವನ್ನ ಡ್ರೋನ್ ಮೂಲಕ ವಿಪ್ರೋ ಕಂಪನಿಗೆ ಸಿಂಪಡಿಸುವುದಾಗಿ, ಊಟದಲ್ಲಿ ಬೆರೆಸುವುದಾಗಿ, ಟಾಯ್ಲೆಟ್‌ನಲ್ಲಿನ ಪೇಪರ್‌‌ಗೆ ಬಳಸೋದಾಗಿ ಬೆದರಿಕೆ ನೀಡಿದ್ದಾರೆ.  Nicin ರಾಸಾಯನಿಕದ ವಾಸನೆ ತೆಗೆದುಕೊಂಡನೆ ಮನುಷ್ಯ ಮೃತಪಡುವ ಸಾಧ್ಯತೆ ಇರುವುದರಿಂದ ವಿಪ್ರೋದಲ್ಲೀಗ ಭಯದ ವಾತಾವರಣ ಏರ್ಪಟ್ಟಿದೆ.  ವಿಪ್ರೋ ಗೆ ಬೆದರಿಕೆ ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರವಿ ಹೇಳಿಕೆ ನೀಡಿದ್ದು, ಈ ಬಗ್ಗೆ ತಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com