ಕಿವಿಯೋಲೆಗಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ: ತಾಯಿಯ ಮೇಲೆ ಬೇಸರ…

ಬೆಳಗಾವಿ : ತಾಯಿ ಕಿವಿ ಓಲೆ ಕೊಡಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು  ಆತ್ಮಹತ್ಯೆ ಮಾಡಿಕೊಂಡ ಘಟನೆ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮದಲ್ಲಿ ನಡೆದಿದೆ.  ಸಂಜನಾ ಸುರೇಶ ಗುರವ (15) ಮೃತ ವಿದ್ಯಾರ್ಥಿನಿಯಾಗಿದ್ದು, ಈಕೆ 8 ನೇ ತರಗತಿಯಲ್ಲಿ ಉತ್ತೀರ್ಣಗೊಂಡು 9 ನೇ ತರಗತಿ ಪ್ರವೇಶಿಸಿದ್ದಳು.
ತಾಯಿ ಗೋಡಂಬಿ ಮಾರಿದ ಹಣದಲ್ಲಿ ದೊಡ್ಡ ಮಗಳಿಗೆ ಚಿನ್ನದ ಆಭರಣ ಮಾಡಿಸಿದ್ದಳು, ಇದನ್ನ ನೋಡಿ ತನಗೂ ಕಿವಿ ಓಲೆ ಕೊಡಿಸುವಂತೆ ಆಕೆ ಬೇಡಿಕೆ ಇಟ್ಟಿದ್ದು, ತಾಯಿ ತನಗೆ ಕಿವಿಯೋಲೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ⁠⁠⁠⁠

Comments are closed.