ಬೆಳಗಾವಿಯಲ್ಲಿ ೭ ಜನ ಬಾಂಗ್ಲಾದೇಶೀಯರ ಬಂಧನ : ವಿಸಾ, ಪಾಸ್‌ಪೋರ್ಟ್‌‌ಗಳಿಲ್ಲದೆ ವಾಸಿಸುತ್ತಿದರು,,

ಬೆಳಗಾವಿ :  ದೇಶದ ಗಡಿಯಲ್ಲಿ ಆಕ್ರಮವಾಗಿ ನುಸುಳಿ ಬಂದು ಬೆಳಗಾವಿಯಲ್ಲಿ ನೆಲೆಸಿದ್ದ 7 ಜನ ಬಾಂಗ್ಲಾ ದೇಶೀಯರನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ. ಓರ್ವ ಮಹಿಳೆ ಸೇರಿ ಏಳು ಜನ ಬಾಂಗ್ಲಾ ದೇಶದ ಪ್ರಜೆಗಳನ್ನ ಬಂಧಿಸಿದ್ದಾರೆ. ಅಂಜುಬೇಗ್ (32)(, ಹಫಿಜುಲ್ಲಾ ಇಸ್ಲಾಂ ( 20), ಹಕೀಬ್ (20)
, ಅಬ್ದುಲ್ ನಿಹಾರ ಅಲಿ ಗಾಜಿ (60), ಅನ್ವರ್ ಸದ್ದಾರ್ (21)
, ರೋಹನ್( 21), ಮಹಮ್ಮದ್  ಬೇಪಾರಿ 26, ಬಂಧಿತ ಬಾಂಗ್ಲಾ ನಿವಾಸಿಗಳಾಗಿದ್ದಾರೆ. ಮಹಮ್ಮದ್ ಬೇಪಾರಿ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ಪ್ರಯಾಣ ಬೆಳೆಸಲು ಯತ್ನಿಸುತ್ತಿದ್ದಾಗ ಪುಣೆ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿರುವ ಇತರ ಕೆಲವರ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಹಮ್ಮದ್ ಬೇಪಾರಿ ನೀಡಿದ ಮಾಹಿತಿ ಮೇಲೆ ಉಳಿದವರನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವು ಮಂದಿ ಬೆಳಗಾವಿಯಲ್ಲಿ ಅಕ್ರಮವಾಗಿ ವಾಸಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.⁠⁠⁠⁠
 ಮತ್ತೆ ಐವರು ಬಾಂಗ್ಲಾ ಪ್ರಜೆಗಳ ಬಂಧನ. ಮಾಳಮಾರುತಿ ಪೋಲಿಸರಿಂದ ಐವರು ಆರೋಪಿಗಳ ಬಂಧನ. ಹಬೀಬೂರ ಶೇಖ್,ರಖಿಬೂಲ್ ಮುರಲಿ, ಇಕ್ರಾಮ್ ಅಬುಲ್ ಕೀಯಾರ್, ಮಹ್ಮದ ಮುಲ್ಲಾ, ಇಬ್ರಾಹಿಂ ಯಾಕೂಬ್ ಬಂಧಿತರು.

Comments are closed.