ಪಾದರಕ್ಷೆ ಉದ್ಯಮಕ್ಕೆ ಬೇಕು ವಿಶೇಷ ನೀತಿ, : ಲಿಬರ್ಟಿಶೂಸ್‌ ಚೇರ್ಮನ್‌ ಆದೇಶ್‌ ಗುಪ್ತ

ಬೆಂಗಳೂರು :  ಪಾದರಕ್ಷೆ ಉದ್ಯಮಕ್ಕೆ ವಿಶೇಷ ನೀತಿ ರೂಪಿಸಬೇಕು. ಇದರಿಂದ ರಾಜ್ಯದಲ್ಲಿ ಉದ್ಯಮ ಬೆಳೆಯಲು ಅನುಕೂಲವಾಗುತ್ತದೆ. ಹೆಚ್ಚು ಬಂಡವಾಳ ಹೂಡಿಕೆ ಆಗುವುದರ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಲಿಬರ್ಟಿ ಶೂಸ್‌ ಚೇರ್ಮನ್‌ ಆದೇಶ್‌ ಗುಪ್ತ ಶುಕ್ರವಾರ ಸಿ.ಎಂ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.
ಲಿಬರ್ಟಿ ಶೂಸ್  ಕಂಪನಿಯ ಚೇರ್ಮನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ್ ಗುಪ್ತ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದು, ಪಾದರಕ್ಷೆ ಉದ್ಯಮಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಪಾದರಕ್ಷೆ ಉದ್ಯಮದ ಮೇಲೆ ಜಿಎಸ್ ಟಿ ದರ ಅಧಿಕವಾಗುವ ಸಾಧ್ಯತೆ ಇರುವ ಕಾರಣ,  ಈ ಕುರಿತು ಕೇಂದ್ರದ ಗಮನ ಸೆಳೆಯುವಂತೆ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್ ಮಾತುಕತೆ ವೇಳೆ ಹಾಜರಿದ್ದರು.⁠⁠⁠⁠

Comments are closed.

Social Media Auto Publish Powered By : XYZScripts.com