ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಜಿಸ್ಯಾಟ್‌- 9 ಯಶಸ್ವಿ ಉಡಾವಣೆ, ಸಾರ್ಕ್ ಗೆ ಭಾರತದ ಕೊಡುಗೆ..

ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಜಿಎಸ್ ಎಲ್ ವಿ-ಎಫ್ 09 ರಾಕೆಟ್ ಮೂಲಕ ಜಿಸ್ಯಾಟ್ -9 ಉಪಗ್ರಹವನ್ನ ಯಶಸ್ವಿಯಾಗಿ ಉಡಾಯಿಸಿದೆ.
ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಿಂದ ಭಾರತೀಯ ಕಾಲಮಾನದ ಪ್ರಕಾರ 4.57ಕ್ಕೆ ಜಿಸ್ಯಾಟ್-9 ಉಡಾಯಿಸಿತು. ದಕ್ಷಿಣಾ ಏಷ್ಯಾದ ವಿವಿಧ ದೇಶಗಳಿಗೆ ಹಲವು ಸೇವೆಗಳನ್ನ ಒದಗಿಸುವ ಉಪಗ್ರಹ ಇದಾಗಿದೆ.

ಸುಮಾರು 450 ಕೋಟಿ ರು. ವೆಚ್ಚ. ಸುಮಾರು 2, 230 ಕೆ.ಜಿ. ತೂಕ, 12 ವರ್ಷಗಳ ಜೀವಿತಾವಧಿಯಿರುವ ಈ ಉಪಗ್ರಹ ಯೋಜನೆಯಿಂದ ಸಾರ್ಕ್ ದೇಶಗಳಿಗೆ, ದೂರಸಂಪರ್ಕ, ಡಿಟಿಎಚ್‌, ಟೆಲಿ ಶಿಕ್ಷಣ, ಟೆಲಿಮೆಡಿಸಿನ್‌, ವಿಪತ್ತು ನಿರ್ವಹಣಾ ನೆರವು ಲಭ್ಯವಾಗಲಿದೆ.

ಯಶಸ್ವೀ ಉಪಗ್ರಹ ಉಡಾವಣೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. “ದಕ್ಷಿಣ ಏಷ್ಯಾ ದೇಶಗಳ ಉಪಗ್ರಹ ಉಡಾವಣೆ ಒಂದು ಐತಿಹಾಸಿಕ ಕ್ಷಣ. ದಕ್ಷಿಣ ಏಷ್ಯಾ ದೇಶಗಳ ನಡುವೆ ಹೊಸ ಭ್ರಾತೃತ್ವ ಆರಂಭವಾಗಿದೆ,” ಎಂದು ಅವರು ಬಣ್ಣಿಸಿದ್ದಾರೆ.

ಇನ್ನು ಉಡಾವಣೆ ನಂತರ ಸಂಭ್ರಮಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಭೂತಾನ್ ಪ್ರಧಾನ ಮಂತ್ರಿಗಳ ಜತೆ ಲೈವ್ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

2 thoughts on “ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಜಿಸ್ಯಾಟ್‌- 9 ಯಶಸ್ವಿ ಉಡಾವಣೆ, ಸಾರ್ಕ್ ಗೆ ಭಾರತದ ಕೊಡುಗೆ..

  • October 25, 2017 at 10:04 AM
    Permalink

    I think this is among the most vital information for me. And i am glad reading your article. But should remark on some general things, The site style is great, the articles is really nice : D. Good job, cheers

Comments are closed.