ಬೆಂಗಳೂರಿಗರಿಗೆ ಗುಡ್‌ ನ್ಯೂಸ್‌ : ಆನ್‌ಲೈನ್‌ಲ್ಲಿ ಸಿಗಲಿದೆ ನಂದಿನಿ ಉತ್ಪನ್ನ : ಇಂದೆ ಬುಕ್‌ ಮಾಡಿ…

ಬೆಂಗಳೂರು: ನಂದಿನಿ ಹಾಲಿನ ಉತ್ಪನ್ನಗಳನ್ನ ಈಗ ಆನ್‌ಲೈನ್‌ನಲ್ಲಿಯೇ ಖರೀದಿಸಬಹುದಾಗಿದ್ದು, ಇನ್ಮುಂದೆ ಹಾಲಿನ ಉತ್ಪನ್ನಗಳು ಗ್ರಾಹಕರ ಮನೆಯ ಬಾಗಿಲಿಗೆ ಬರಲಿವೆ. ಈ ಸೇವೆ ಸಧ್ಯ ಬೆಂಗಳೂರಿಗರಿಗೊಂದೇ ಲಭ್ಯವಿದ್ದು,  ಶುಕ್ರವಾರ  ‘ಡೈರಿ ಆನ್ ಲೈನ್’ ಗೆ ಕೆಎಂಎಫ್ ಎಂ.ಡಿ ರಾಕೇಶ್ ಸಿಂಗ್ ಚಾಲನೆ ನೀಡಿದ್ದಾರೆ.
 ಬೆಂಗಳೂರು ನಗರದ ಎಲ್ಲಾ ಕಡೆಗಳಲ್ಲೂ ಡೋರ್ ಡೆಲಿವರಿ ವ್ಯವಸ್ಥೆ ಇದ್ದು, ಇಂದಿನಿಂದಲೇ ಗ್ರಾಹಕರು ಖರೀದಿ ಆರಂಭಿಸಬಹುದು ಎಂದು ರಾಕೇಶ್‌ ಸಿಂಗ್‌ ತಿಳಿಸಿದ್ದಾರೆ. ನಂದಿನಿ ಉತ್ಪನ್ನಗಳನ್ನ ಆನ್‌ಲೈನ್‌ನಲ್ಲಿ ಖರೀದಿಸಲು  www.edairy.co.in ಮೂಲಕ ಲಾಗಿನ್ ಆಗಬೇಕು. ಬೆಳಗ್ಗೆ 9 ರಿಅಂದ 12 ಹಾಗೂ ಸಂಜೆ 4 ರಿಂದ 8 ರವರೆಗೆ ಬುಕಿಂಗ್ ಮಾಡಬಹುದದಾಗಿದ್ದು, ಕನಿಷ್ಠ 250 ರೂ ಮೊತ್ತದ ಉತ್ಪನ್ನಗಳನ್ನು ಖರೀದಿ ಮಾಡಿದವರಿಗೆ ಮಾತ್ರ,  ಗ್ರಾಹಕರು ಆರ್ಡರ್ ಮಾಡಿದ ಉತ್ಪನ್ನಗಳನ್ನು ಸ್ಟಾಕ್ ಪಾಯಿಂಟ್ ಗಳಿಂದ ಉಚಿತವಾಗಿ ಡೋರ್ ಡೆಲಿವರಿ ವ್ಯವಸ್ಥೆ ಮಾಡಲಾಗುವುದು ಎಂದು ಕೆ.ಎಂ.ಎಫ್‌  ಎಂ.ಡಿ ರಾಕೇಶ್‌ ಸಿಂಗ್‌ ತಿಳಸಿದ್ದಾರೆ.

Comments are closed.