Bengaluru : ಕೆಂಪೇಗೌಡ್​ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದದಲ್ಲಿ ನಲ್ಲಿ ಇನ್ನಷ್ಟು ವೇಗ..

ಬೇರೆ-ಬೇರೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಕೆಂಪೇಗೌಡ್​ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇನ್ನು ಮುಂದೇ ಇನ್ನಷ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ.  ಹೌದು ವಿನಾಮಗಳ ಟೇಕಾಪ್ ಮತ್ತು ಲ್ಯಾಂಡಿಂಗ್​ ವೇಗ ಹೆಚ್ಚಿಸುವ ರ್ಯಾಪಿಡ್​ ಎಕ್ಸಿಟ್​ ಟ್ಯಾಕ್ಸಿ ವೇ   ವ್ಯವಸ್ಥೆಯನ್ನು ರನ್​ವೇಗೆ ವಿಮಾನ ನಿಲ್ದಾಣ ಆಳವಡಿಸಿಕೊಳ್ಳಲಾಗಿದೆ. ಇದರಿಂದ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಚುರುಕಾಗಲಿದ್ದು, ದಟ್ಟಣೆ ಇಳಿಮುಖವಾಗಲಿದೆ.
ಮೇ 1 ರಿಂದ ಈ ವ್ಯವಸ್ಥೆ ಜಾರಿಯಾಗಿದ್ದು, ಈಗ  ಆರ್​ಇಟಿ ತಂತ್ರಜ್ಞಾನದಿಂದ  ಲ್ಯಾಂಡಿಂಗ್ ಆದ ವಿಮಾನ ಒಂದು ನಿಮಿಷದೊಳಗೆ  ನಿಲ್ದಾಣ ತಲುಪುತ್ತದೆ. ಹೀಗಾಗಿ ಈಗ ಟೇಕಾಪ್ ವಿಮಾನಗಳಿಗೆ ಬೇಗ ಕ್ಲಿಯರೆನ್ಸ್ ಸಿಗುತ್ತದೆ. ಇದುವರೆಗೂ ಲ್ಯಾಂಡಿಂಗ್​ ಪ್ರಕ್ರಿಯೆ 4-5 ನಿಮಿಷಗಳ ಕಾಲಾವಕಾಶ ತೆಗೆದುಕೊಳ್ತಿತ್ತು. ಹೀಗಾಗಿ ಗಂಟೆಗೆ ಕೇವಲ 30-34 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿತ್ತು. ಇದೀಗ ಈ ತಂತ್ರಜ್ಞಾನ ಅಳವಡಿಕೆಯಿಂದ  ಒಂದೂವರೆ ನಿಮಿಷದಲ್ಲಿ ಪ್ರಕ್ರಿಯೆ ನಡೆಯಲಿದ್ದು, ಗಂಟೆಗೆ ಒಟ್ಟು 44 ವಿಮಾನಗಳು ಹಾರಾಟ ನಡೆಸಲು ಅವಕಾಶ ಸಿಗಲಿದೆ.
ಲ್ಯಾಂಡಿಂಗ್ ಆದ ವಿಮಾನವೊಂದು ಕ್ಷಿಪ್ರವಾಗಿ ವಿಮಾನ ನಿಲ್ದಾಣ ಸೇರುವಂತೆ ಮಾಡುವ ವ್ಯವಸ್ಥೆಯೇ ರ್ಯಾಪಿಡ್​  ಎಕ್ಸಿಟ್​ ಟ್ಯಾಕ್ಸಿ ವೇ.  ತಿರುವುಗಳಿದ್ದರೇ ವಿಮಾನ ಸಂಚಾರ ನಿಧಾನವಾಗುತ್ತದೆ. ಈ ವ್ಯವಸ್ಥೆಯಲ್ಲಿ  ರನ್​ವೇ ಗೆ ಸಂಪರ್ಕ ಕಲ್ಪಿಸುವ  ಮಾರ್ಗದಲ್ಲಿನ ತಿರುವುಗಳನ್ನು ಕಡಿಮೆ ಮಾಡಲಾಗುತ್ತದೆ. ಇಷ್ಟು ದಿನಗಳ ಕಾಲ ಕಾಮಗಾರಿ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಮಾತ್ರ ಹಾರಾಟ ನಡೆಸುತ್ತಿದ್ದ ವಿಮಾನಗಳು ಕಾಮಗಾರಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ  ಮೇ 1 ರಿಂದ  ದಿನದ 24 ಗಂಟೆಯೂ ಹಾರಾಟ ನಡೆಸಲಿದೆ. ಇನ್ನು  ಕೆಐಎಎಲ್​ನಲ್ಲಿ  ಪ್ರತಿನಿತ್ಯ 500ಕ್ಕೂ ಹೆಚ್ಚು  ವಿಮಾನಗಳು ಹಾರಾಟ ನಡೆಸುತ್ತಿದ್ದು, 70-75 ಸಾವಿರ  ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ಈ  ಹೊಸ ತಂತ್ರಜ್ಞಾನದಿಂದ ವಿಮಾನ ನಿಲ್ದಾಣ ಮತ್ತಷ್ಟು ವೇಗಪಡೆದುಕೊಳ್ಳಲಿದೆ.

Comments are closed.

Social Media Auto Publish Powered By : XYZScripts.com