Black & white : ಬಾಂಬ್ ನಾಗನ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್..

ಬೆಂಗಳೂರು: ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರಿಸಿಕೊಂಡಿರುವ ಬಾಂಬ್ ನಾಗನ ನೀರಿಕ್ಷಣಾ ಜಾಮೀನು ಅರ್ಜಿಯನ್ನ ಬೆಂಗಳೂರಿನ 21ನೇ ಸೆಷನ್ ಕೋರ್ಟ್ ವಜಾ ಮಾಡಿ ಆದೇಶ ಹೊರಡಿಸಿದೆ.ಬಾಂಬ್ ನಾಗನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಪಾರ ಪ್ರಮಾಣದ ಹಳೆಯ ನೋಟುಗಳು ಪತ್ತೆಯಾಗಿದ್ದವು. ಈ ನಡುವೆ ಬಾಂಬ್ ನಾಗ್ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿದ್ದನು ಎನ್ನಲಾಗಿದೆ. ಈ ನಡುವೆ ಕೆಲವರನ್ನ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಇದೀಗ ಅಪಹರಣ, ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಆರೋಪಿಯಾಗಿರುವ ಬಾಂಬ್ ನಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರಿಸಿಕೊಂಡಿದ್ದಾನೆ. ಅಜ್ಞಾತ ಸ್ಥಳದಲ್ಲಿ ಕುಳಿತಿರುವ ಬಾಂಬ್ ನಾಗ ಅಲ್ಲಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು.

ಈ ಅರ್ಜಿಯ ವಿಚಾರಣೆಯನ್ನ ಬೆಂಗಳೂರಿನ 21ನೇ ಸೆಷನ್ಸ್ ಕೋರ್ಟ್ ನಿನ್ನೆ ನಡೆಸಿ ತೀರ್ಪನ್ನ ಇಂದಿಗೆ ಕಾಯ್ದಿರಿಸಿತ್ತು. ಇದೀಗ ಅರ್ಜಿಯನ್ನ ವಜಾ ಮಾಡಿ ಕೋರ್ಟ್ ಆದೇಶ ನೀಡಿದೆ.

Comments are closed.

Social Media Auto Publish Powered By : XYZScripts.com