Bengaluru : ನಾಯಿ ಕತ್ತಿಗೆ ಚಿಪ್ ಅಳವಡಿಸಬೇಕು-ಇನ್ನು ಮುಂದೇ ನಾಯಿ ಸಾಕೋಕು ಅನುಮತಿ ಬೇಕು..

ಸಿಲಿಕಾನ ಸಿಟಿಯ ಜನರು ಪ್ರಾಣಿಪ್ರಿಯರು. ಹೀಗಾಗಿ ನಗರದ ರಸ್ತೆಗಳಲ್ಲಿ ಸಾಕಷ್ಟು ಜನರು ತಮ್ಮ ಪೆಟ್​ಗಳ ಜೊತೆ ವಾಕಿಂಗ್ ಮಾಡೋ ದೃಷ್ಯ ನಿಮಗೆ ನೋಡೋಕೆ ಸಿಗುತ್ತೆ. ಆದರೇ ಇನ್ನು ಮುಂದೇ ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ನಾಯಿಗಳನ್ನು ಸಾಕುವಂತಿಲ್ಲ. ಹೌದು ಸಿಲಿಕಾನ ಸಿಟಿಯಲ್ಲಿ ಇನ್ನು ಮುಂದೆ ನಾಯಿ ಸಾಕೋದಿಕ್ಕೆ ಬಿಬಿಎಂಪಿ ಅನುಮತಿ ಕಡ್ಡಾಯವಾಗಲಿದ್ದು, ಜೊತೆಗೆ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಕೂಡಾ ಅಗತ್ಯ.
ನಗರದಲ್ಲಿ ನಾಯಿ ಸಾಕಲು ಬಿಬಿಎಂಪಿ ಅನುಮತಿ ತೆಗೆದುಕೊಳ್ಳಬೇಕೆಂದು ನಿಯಮ ರೂಪಿಸಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಕಳಿಸಲಾಗಿದೆ.  ತಿಂಗಳ ಹಿಂದೆ  ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆ ಸಧ್ಯದಲ್ಲೇ ಅನೋದನೆಗೊಳ್ಳಲಿದ್ದು, ನಾಯಿ‌ಪ್ರಿಯರೂ ತಮ್ಮ ಮನೆಯಲ್ಲಿರುವ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಶುಲ್ಕ ಪಾವತಿಸಿ ಅನುಮತಿ ಪಡೆಯೋದು ಕಡ್ಡಾಯ.
ಕೇವಲ ಅನುಮತಿ ಮಾತ್ರವಲ್ಲದೇ ಸಾಕುವ ನಾಯಿ ಯ ಜಾತಿ, ಹಾಕಿಸಲಾದ ಲಸಿಕೆಗಳು,ಮಾಲೀಕರ ಮಾಹಿತಿಯನ್ನು ಒಳಗೊಂಡ ಮೈಕ್ರೋ ಚಿಪ್ ನ್ನು ಸಾಕುನಾಯಿಯ ಕತ್ತಿಗೆ ಹಾಕೋದು ಕಡ್ಡಾಯ.  ಇದರಿಂದ ನಾಯಿಯ ಸಂಪೂರ್ಣ ಮಾಹಿತಿ ಪಡೆಯಲು ನೆರವಾಗಲಿದೆ. ಇನ್ನು ಒಂದು ನಾಯಿ ಸಾಕಲು ೨೫೦ ರೂಪಾಯಿ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಅಪಾರ್ಟಮೆಂಟ್ ಗಳಿಗೆ ಒಂದು ಪ್ಲಾಟ್ ಗೆ ಒಂದು ನಾಯಿಯನ್ನು ಸಾಕಲು ಮಾತ್ರ ಅವಕಾಶವಿದೆ. ಸ್ವಂತ ಮನೆಗಳಲ್ಲಿ ೨-೩ ನಾಯಿಗಳನ್ನು ಸಾಕಬಹುದಾಗಿದೆ.ಆದರೇ ಅತಿ ಎತ್ತರವಾದ ಮತ್ತು ಆಕ್ರಮಶೀಲ ಜಾತಿಯ ಸಾಕುವಂತಿಲ್ಲ ಎಂಬುದು ಬಿಬಿಎಂಪಿ ನಿಯಮ.
ಬಿಬಿಎಂಪಿಯ ಪಶುಪಾಲನಾ ವಿಭಾಗದ ಅಧಿಕಾರಿಗಳು ಈ ಎಲ್ಲ ಅಂಶ ಒಳಗೊಂಡ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ನಿಯಮ ಗಳು ಜಾರಿಗೆ ಬರಲಿದೆ.ಇನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸಾಕು ನಾಯಿಗಳಿಂದ ಮಲ-ಮೂತ್ರ ವಿಸರ್ಜನೆ ಮಾಡಿಸಿದಲ್ಲಿ ಮೊದಲ ಭಾರಿಗೆ ೧೦೦ ರೂಪಾಯಿ ದಂಡ ವಿಧಿಸಲಾಗುತ್ತದೆ.ಆದರೇ ಹಲವಾರು ಭಾರಿ ಪುನರಾವರ್ತನೆಯಾದಲ್ಲಿ ಸಾವಿರ ರೂಪಾಯಿ ದಂಡ ಬೀಳುತ್ತದೆ.
 ಒಟ್ಟಿನಲ್ಲಿ ನಗರದಲ್ಲಿ ಸಾಕು ನಾಯಿಗಳ ‌ಹಾವಳಿ ತಡೆಯಲು ಬಿಬಿಎಂಪಿ ಗಂಭೀರವಾಗಿ ಚಿಂತನೆ ನಡೆಸಿ ಯೋಜನೆ ಸಿದ್ದಪಡಿಸಿದೆ. ಒಂದೊಮ್ಮೆ‌ನಿಯಮ ‌ಜಾರಿಯಾದರೇ ಸಾಕುನಾಯಿಗಳ ದರ್ಬಾರಿಗೆ ಕಡಿವಾಣ ಬೀಳಲಿದೆ.

Social Media Auto Publish Powered By : XYZScripts.com