ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ಒದಗಿಸಿ : ಬೆಳಗಾವಿಯಲ್ಲಿ ಎಂಇಎಸ್‌ ಕ್ಯಾತೆ..

ಬೆಳಗಾವಿ: ಸರ್ಕಾರಿ ದಾಖಲಾತಿಗಳನ್ನ ಮರಾಠಿ ಭಾಷೆಯಲ್ಲಿ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುವ ಮೂಲಕ ಎಂಇಎಸ್ ಮುಖಂಡರು ಶುಕ್ರವಾರ ಮತ್ತೆ ಬೆಳಗಾವಿಯಲ್ಲಿ ಕ್ಯಾತೆ ತೆಗೆದಿದ್ದಾರೆ.  ಗಡಿ ಜಿಲ್ಲೆಯಲ್ಲಿ ಸಾಕಷ್ಟು ಮರಾಠಿ ಭಾಷಿಕರು ಇರುವುದರಿಂದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಜತೆಗೆ ಮರಾಠಿ ಭಾಷೆಯಲ್ಲಿ ದಾಖಲಾತಿಗಳನ್ನ ಮತ್ತು ಮಾಹಿತಿಗಳನ್ನ ಒದಗಿಸುವಂತೆ ಎಂಇಎಸ್‌ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಅಲ್ಲದೆ, ನಗರದ ಸ್ಮಾರ್ಟ್ ಸಿಟಿ ಅಡಿ ತೆರವು ಕಾರ್ಯಚರಣೆಯಲ್ಲಿ ಮನೆ ಮತ್ತು ನಿವೇಶನ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ನೀಡುವಂತ್ತೆ ಆಗ್ರಹಿಸಿ  ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸುವುದರ ಮೂಲಕ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.⁠⁠⁠⁠

Comments are closed.

Social Media Auto Publish Powered By : XYZScripts.com