ಮೈಸೂರಿಗೆ ಕೈತಪ್ಪಿತು ನಂ 1 ಸ್ವಚ್ಛನಗರಿ ಬಿರುದು : ಇಂದೋರ್ ಗೆ ಅಗ್ರಪಟ್ಟ, ಕನ್ನಡಿಗರಿಗೆ ನಿರಾಸೆ,,,

ಮೈಸೂರು: ಸತತ ಎರಡು ವರ್ಷಗಳ ಕಾಲ ದೇಶದ ನಂಬರ್ ಒನ್ ಸ್ವಚ್ಚನಗರಿ ಪ್ರಶಸ್ತಿ ಪಡೆದಿದ್ದ ಸಾಂಸ್ಕೃತಿಕ ನಗರಿ ಮೈಸೂರು, ಈ ಬಾರಿ ಬಿರುದು ಪಡೆಯುವಲ್ಲಿ ಸೋತಿದೆ. ಈ ಸಂಬಂಧ ಹ್ಯಾಟ್ರಿಕ್ ಸಾಧನೆಯ ನಿರೀಕ್ಷೆಯಲ್ಲಿದ್ದ ಕನ್ನಡ ಜನತೆಗೆ ನಿರಾಶೆಯಾಗಿದೆ. ದೆಹಲಿಯಲ್ಲಿ ಗುರುವಾರ ನಡೆಯುತ್ತಿರುವ ಸಮಾರಂಭದಲ್ಲಿ ದೇಶದ ನಂಬರ್ ಒನ್ ಸ್ವಚ್ಚನಗರಿಯಾಗಿ ಮಧ್ಯಪ್ರದೇಶದ ಇಂದೋರ್ ನಗರ ಘೋಷಣೆಯಾಗಿದ್ದು, ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿಗೆ 5ನೇ ಸ್ಥಾನ ಲಭ್ಯವಾಗಿದೆ.
2015 ಮತ್ತು 2016ರ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡು ಮೆರೆದಿದ್ದ ನಮ್ಮ ಅರಮನೆ ನಗರಿಗೆ ಈ ಬಾರಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇತ್ತೀಚೆಗೆ ಮೈಸೂರಿನ ಕೆಲ ನಗರ ಪಾಲಿಕೆ ಸದಸ್ಯರು, ರಾಜಕೀಯ ಮುಖಂಡರು ಮೈಸೂರು ಈ ಬಾರಿಯೂ ನಂಬರ್ ಒನ್ ಸ್ವಚ್ಛ ನಗರ ಪಟ್ಟ ಗಳಿಸಿದೆ ಎಂದು ಹೇಳಿಕೊಂಡು ಬೀಗಿದ್ದು, ಮಾಧ್ಯಮಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅವರೆಲ್ಲರ ನಿರೀಕ್ಷೆ ಹುಸಿಯಾಗಿದೆ.⁠⁠⁠⁠

Comments are closed.

Social Media Auto Publish Powered By : XYZScripts.com