ಮುಷ್ಕರಕ್ಕೆ ನಿರ್ಧಾರ ಕೈಗೊಂಡಿರುವ ಪೆಟ್ರೋಲ್‌ ಬಂಕ್‌ ಮಾಲಿಕರು : ಮೇ 9ರ ವರೆಗೆ ಸರ್ಕಾರಕ್ಕೆ ಗಡುವು

ಪೆಟ್ರೋಲ್ ಬಂಕ್ ಮಾಲಿಕರು ಮತ್ತೆ ಮುಷ್ಕರ ನಡೆಸುವ ಸಾಧ್ಯತೆ ಇದ್ದು, ಹಳೆಯ ಬೇಡಿಕೆ ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿಯಲಿದ್ದಾರೆ ಎಂಬ ಮಾಹಿತಿ ಇದೆ.  ಪೆಟ್ರೋಲ್‌ ಬಂಕ್‌ ಮಾಲಿಕರು ತಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮೇ ೯ರ ವರೆಗೆ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದಲ್ಲಿ ಮೇ ೧೦ರಿಂದ ಯಾವುದೇ ಪೆಟ್ರೋಲ್‌ ಖರೀದಿಸದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
 ಮೇ 15ರಿಂದ ಒಂದು ಪಾಳಿಯ ಕೆಲಸಕ್ಕೆ ನಿರ್ಧಾರ ಕೈಗೊಂಡಿರುವ ಅವರು, ಮೇ  14ರಿಂದ ಪ್ರತೀ ಭಾನುವಾರ ಪೆಟ್ರೋಲ್ ಸೇವೆ ಸ್ಥಗಿತಗೊಳಿಸಲು ನಿರ್ಣಯಿಸಿದ್ದಾರೆ. ಮತ್ತು ಪೆಟ್ರೋಲ್ ಮತ್ತು ಡೀಸಲ್ ಮೇಲಿನ 15 ಹಾಗೂ 10ಪೈಸೆಯನ್ನ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ನೀಡಲು ಸರ್ಕಾರದ ಮೇಲೆ ಅವರು ಒತ್ತಾಯ ಹೇರಿದ್ದರು. ಈ ಬಾರಿ ಸರ್ಕಾರ ಇವರ ಬೇಡಿಕೆಗೆ ಯಾವ ಪರಿಹಾರ ನೀಡಲಿದೆ ಎಂದು ಕಾದು ನೋಡಬೇಕು. ⁠⁠⁠⁠

Comments are closed.