ಪವರ್‌ಗ್ರಿಡ್‌ ಕಂಬನೆಡುವ ಸ್ಥಳಕ್ಕೆ ಮಾರುಕಟ್ಟೆಯ 100ರಷ್ಟು ಬೆಲೆ ನೀಡಬೇಕು : ಕೋಡಿಹಳ್ಳಿ ಚಂದ್ರಶೇಖರ್‌

ರಾಮನಗರ:  2009 ರಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನವಾದಂತೆ, ಪವರ್‌ಗ್ರಿಡ್‌‌ ಕಂಬ ನೆಡುವ ಸ್ಥಳಕ್ಕೆ ಮಾರುಕಟ್ಟೆಯ 100 ರಷ್ಟು ಬೆಲೆಯನ್ನ ನೀಡಬೇಕು, ಕಾರಿಡಾರ್ ಮಾರ್ಗಕ್ಕೆ 65 ರಷ್ಟು ಬೆಲೆಯನ್ನ ಸರ್ಕಾರ ರೈತರಿಗೆ  ನೀಡಬೇಕೆಂದು ಗುರುವಾರ ಕೋಡಿಹಳ್ಳಿ ಚಂದ್ರಶೇಖರ್‌ ಆಗ್ರಹಿಸಿದ್ದಾರೆ. ಗುರುವಾರ ರಾಮನಗರದಲ್ಲಿ ನಡೆದ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ್ದು, ಪವರ್ ಗ್ರಿಡ್‌ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನ ಪವರ್‌ಗ್ರಿಡ್‌ ಸಂಸ್ಥೆ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.
 ರಾಮನಗರದಲ್ಲಿ  ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯ ಸಂಸ್ಥೆಯ ವಿಚಾರವಾಗಿಯೇ ಗುರುವಾರ ಸಭೆ ನಡೆದಿದ್ದು,  ತಮಿಳುನಾಡಿನ ಸೇಲಂನಿಂದ ಕರ್ನಾಟಕದ ಮಧುಗಿರಿ, ಮಹಾರಾಷ್ಟ್ರದ ಸೊಲ್ಲಾಪುರದವರೆಗೆ ಹೆವಿ ಹೊಲ್ಟೇಜ್ ಲೈನ್ ಅಳವಡಿಸಲಾಗುತ್ತಿದೆ.  ಇದರ ಪರಿಣಾಮ ಬಹಳ ಕೆಟ್ಟದಿದೆ ಎಂದು ನಮ್ಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಆದರೂ ಇದಕ್ಕೆ ಭೂಮಿ ನೀಡಿರುವ ರೈತರಿಗೆ ಮಾತ್ರ ಸರಿಯಾದ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೈತರಿಗೆ ಪೊಲೀಸರ ಮೂಲಕ ಬೆದರಿಸಿ ತಮ್ಮ ಕೆಲಸವನ್ನ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ,  ಮುಂದೆ ಅವರ ಅಧ್ಯಕ್ಷತೆಯಲ್ಲೇ ತೀರ್ಮಾನವಾಗಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದ್ದಾರೆ

Comments are closed.

Social Media Auto Publish Powered By : XYZScripts.com