IPL: ಗುಜರಾತ್ ಲಯನ್ಸ್ `ಬೆನ್` ಮುರಿದ ದುಬಾರಿ ಸ್ಟೋಕ್

ಹತ್ತನೇ ಆವೃತ್ತಿ ಐಪಿಎಲ್ ನ ದುಬಾರಿ ಆಟಗಾರ ರೈಸಿಂಗ್ ಪುಣೆ ಸೂಪರ್ ಜೆಂಟ್ಸ್ ತಂಡದ ಬೆನ್ ಸ್ಟೋಕ್ಸ್ ಬಾರಿಸಿದ ಭರ್ಜರಿ ಶತಕದ ನೆರವಿನಿಂದ 5 ವಿಕೆಟ್ ಗಳಿಂದ ಸೋಮವಾರ ನಡೆದ ಪಂದ್ಯದಲ್ಲಿ ಲಯನ್ಸ್ ತಂಡಕ್ಕೆ ಶಾಕ್ ನೀಡಿ, ಪುಣೆ ತಂಡ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಆಡಿರುವ 10 ಪಂದ್ಯಗಳಲ್ಲಿ 6 ಜಯ ದಾಖಲಿಸಿರುವ ಸ್ಮಿತ್ ಪಡೆ ಪ್ಲೇ ಆಫ್ ಗೆ ಇನ್ನು ಎರಡೇ ಹೆಜ್ಜೆ ದೂರ ನಿಂತಿದೆ. ಲಯನ್ಸ್ ಇಷ್ಟೇ ಪಂದ್ಯಗಳಲ್ಲಿ 3 ಜಯ ಸಾಧಿಸಿ ಮುಂದಿನ ಹಂತ ತಲುಪಲು ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.

ಸುರೇಶ್ ರೈನಾ ಪಡೆ ನೀಡಿದ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪುಣೆ ತಂಡದ ಪರ ಬೆನ್ ಸ್ಟೋಕ್ಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. 63 ಎಸೆತದಲ್ಲಿ 6 ಬೌಂಡರಿ, 7 ಸಿಕ್ಸರ್ ನೆರವಿನಿಂದ 103 ರನ್ ಬಾರಿಸಿದ, ಸ್ಟೋಕ್ಸ್ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಈ ಬಾರಿ ಐಪಿಎಲ್ ನಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಗೆಲ್ಲಲು ಬೇಕಿದ್ದ 167 ರನ್ ಗಳಲ್ಲಿ 103 ರನ್ ಒಬ್ಬನೇ ಆಟಗಾರ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು. ಅಜಿಂಕ್ಯ ರಹಾನೆ, ರಾಹುಲ್ ತ್ರಿಪಾಠಿ, ಮನೋಜ್ ತಿವಾರಿ, ಜವಾಬ್ದಾರಿಯುತ ಆಟ ಆಡಲಿಲ್ಲ. ಧೋನಿ 26, ಡೇನಿಯಲ್ ಕ್ರಿಶ್ಚಿಯನ್ ಅಜೇಯ 17 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ  ಇಶಾನ್ ಕಿಶನ್ ಹಾಗೂ ಬ್ರೆಂಡನ್ ಮೆಕಲಂ ತಂಡಕ್ಕೆ ಅರ್ಧಶತಕದ ಕಾಣಿಕೆ ನೀಡಿದರು. ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಏರಾನ್ ಫಿಂಚ್, ಡ್ವೇನ್ ಸ್ಮಿತ್, ದೊಡ್ಡ ಇನಿಂಗ್ಸ್ ಕಟ್ಟದೇ ಇದ್ದರೂ, ಮಧ‍್ಯಮ ಹಾಗೂ ಕೆಳ ಕ್ರಮಾಂಕದ ಆಟಗಾರ ನೆರವಿನಿಂದ ಪುಣೆ 19.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 161 ರನ್ ಕಲೆ ಹಾಕಿತು.

Comments are closed.

Social Media Auto Publish Powered By : XYZScripts.com