ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಎಸೆತ : ಕಲ್ಲು ಎಸೆದವರ ಮೇಲೆ ಫತ್ವಾ ಹೊರಡಿಸಲಿ : ಮುತಾಲಿಕ್‌

ಧಾರವಾಡ: ಜಮ್ಮು ಕಾಶ್ಮೀರ ನಲ್ಲಿ ಸೈನಿಕರ ಮೇಲೆ ಕಲ್ಲು ಎಸೆತ ಪ್ರಕರಣದ ಬಗ್ಗೆ ದೇಶದ ಮುಸ್ಲೀಮರ್‌ ಮಾತನಾಡಲಿ, ಇಲ್ಲದಿದ್ದರೆ ಆ ಕಲ್ಲುಗಳು ಇವರ ಮೇಲೆ ತಿರುಗುತ್ತವೆ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್‌ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮಂಗಳವಾರ ಮಾತನಾಡಿದ ಇವರು, ಇಲ್ಲಿಯ ಮುಸ್ಲೀಮರು ಅವರಿಗೆ ತಿಳಿ ಹೇಳಲಿ, ಕಲ್ಲು ಎಸೆದವರ ಮೇಲೆ ಫತ್ವಾ ಹೊರಡಿಸಲಿ ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ.
ತೆಲಂಗಾಣಾ ರಾಜ್ಯದಲ್ಲಿ ಮುಸ್ಲಿಮರ ಒಲೈಕೆಗೆ ಸರ್ಕಾರ ಮುಂದಾಗಿದೆ. ಅಲ್ಲಿ‌ ಮುಸ್ಲಿಮರಿಗೆ ಹೆಚ್ಚಿನ ಮೀಸಲಾತಿ ಕೊಡಲಾಗುತ್ತಿದೆ, ಇದು ತನಿಖೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತೆಲಂಗಾಣವು ಸಹ ಪಾಕಿಸ್ತಾನ ಇದ್ದಂತೆ ಎಂದು ಅಭಿಪ್ರಾಯಪಟ್ಟಿರುವ ಮುತಾಲಿಕ್‌,  ದಿಗ್ವೀಜಯಸಿಂಗ್ ಸುಮ್ಮನೆ ಹೇಳಿಕೆ ನೀಡಿಲ್ಲ. ಇದು ತನಿಖೆಯಾಗಲಿ ಎಂದಿದ್ದಾರೆ. ನಮ್ಮ ಇಬ್ಬರು ಸೈನಿಕರ ಶಿರಛೇದ ಮಾಡಿದ ಪಾಕಿಸ್ತಾನಕ್ಕೆ  ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಬೇಕು ಎಂದು ಮುತಾಲಿಕ್‌ ಆಗ್ರಹಿಸಿದ್ದಾರೆ.

Comments are closed.