Hassan : ಗುಡುಗು ಸಿಡಿಲಿನ ರಭಸಕ್ಕೆ ಸಿಡಿಮದ್ದು ಸಿಡಿದು ಮೂವರ ಸಾವು …

ಹಾಸನ: ಮಿಂಚು ಗುಡುಗಿನ ರಭಸಕ್ಕೆ ಸಿಡಿಮದ್ದು ಸಿಡಿದು 3ಮಂದಿ ಮೃತಪಟ್ಟಿರುವ ದಾರುಣ ಘಟನೆ, ಹಾಸನದ ಗೊರೂರು ಹೋಬಳಿಯ ಮೂಡಲಕೊಪ್ಪಲು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.  ಹಾಸನದ ಕಟ್ಟಾಯದಲ್ಲಿರುವ ಕಲ್ಲು ಕ್ವಾರೆಯಲ್ಲಿ ಕೆಲಸ ನಡೆಯುತ್ತಿದ್ದು, ಸೋಮವಾರ ಸಂಜೆ ಬಂಡೆ ಸಿಡಿಸಲು ಸಿಡಿಮದ್ದು ಜೋಡಿಸುವ ಸಂದರ್ಭದಲ್ಲಿ ಗುಡುಗು ಸಿಡಿಲಿನ ‌ರಭಸಕ್ಕೆ  ಕಲ್ಲು ಕ್ವಾರಿಯಲ್ಲಿದ್ದ ಜಿಲೆಟಿನ್ ಕಡ್ಡಿ ಸಿಡಿದು ಘಟನೆ ಸಂಭವಿಸಿದೆ.
  ಮೃತರು ಮೂಡಲುಕೊಪ್ಪಲಿನ ಜಗದೀಶ (50), ಪುನೀತ್ (23), ಅರಕಲಗೂಡು ತಾಲ್ಲೂಕು ದಡದಹಳ್ಳಿ ಗ್ರಾಮದ ನಾಗರಾಜು (40) ಎಂದು ತಿಳಿದುಬಂದಿದ್ದು,  ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸಂಜೆಯಿಂದ ಹಾಸನ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರ ಮಳೆಯಾಗಿತ್ತು.

Comments are closed.

Social Media Auto Publish Powered By : XYZScripts.com