Cricket, ICC ranking : ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ ….

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡ ಮೂರನೇ ಸ್ಥಾನಕ್ಕೇರಿದೆ. ಐದು ಹೆಚ್ಚುವರಿ ಅಂಕಗಳನ್ನು ಗಳಿಸಿರುವ ಭಾರತ, 117 ಪಾಯಿಂಟ್ಸ್ ಗಳಿಂದ ಮೂರನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನು ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿಯೇ ಮುಂದುವರಿದಿದೆ.


ನ್ಯೂಜಿಲೆಂಡ್ ಈಗ 115 ಪಾಯಿಂಟ್ಸ್ ಗಳಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಎಂಟನೇ ಸ್ಥಾನದಲ್ಲಿದ್ದ ಪಾಕಿಸ್ತಾನ ತಂಡ 9ನೇ ಸ್ಥಾನಕ್ಕೆ ಕುಸಿದಿದ್ದರೆ ವೆಸ್ಟ್‌ಇಂಡೀಸ್‌ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. 2017ರ ಸೆಪ್ಟೆಂಬರ್‌ 30ರಂದು ಅಗ್ರ ಎಂಟು ಸ್ಥಾನ ಹೊಂದಿರುವ ತಂಡಗಳು ಮಾತ್ರ ಐಸಿಸಿ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸಲಿವೆ.

ಉಳಿದ ತಂಡಗಳು ಅರ್ಹತಾ ಟೂರ್ನಿ ಆಡಬೇಕು. ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಈಗಾಗಲೇ ಈ ಎರಡೂ ತಂಡಗಳು ಪಾಯಿಂಟ್ಸ್ ಗಳನ್ನು ಕಳೆದು ಕೊಂಡು ಎಂಟು ಹಾಗೂ ಒಂಬತ್ತನೇ ಸ್ಥಾನದಲ್ಲಿ ಇವೆ. ಪಾಕಿಸ್ತಾನ 90ರಿಂದ 88 ಪಾಯಿಂಟ್ಸ್ ಗೆ ಕುಸಿದಿದೆ. ವೆಸ್ಟ್‌ ಇಂಡೀಸ್‌ 83ರಿಂದ 79ಕ್ಕೆ ಇಳಿದಿದೆ.

Comments are closed.

Social Media Auto Publish Powered By : XYZScripts.com