ಶ್ರೀನಿವಾಸ್ ಪ್ರಸಾದ್ ಗೆ ಉಪಾಧ್ಯಕ್ಷ ಸ್ಥಾನ: ಬಲಗೊಂಡಿತೇ ಬಿಎಸ್ ವೈ ಬಣ ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗು ಕೆ.ಎಸ್ ಈಶ್ವರಪ್ಪ  ಇಬ್ಬರ ನಡುವಿನ ಕಿತ್ತಾಟಕ್ಕೆ ತಾತ್ಕಾಲಿಕ ತಡೆಯೇನೋ ತಂದಿದ್ದಾಗಿದೆ. ಇಬ್ಬರಿಗೂ ಮಾಧ್ಯಮದ ಮುಂದೆ ಮಾತಾಡದಂತೆ ತಾಕೀತು ಕೂಡ ಮಾಡ್ಲಾಗಿದೆ. ಆದ್ರೆ ಬಿಎಸ್ ವೈ ಮಾತ್ರ ತನ್ನ ಬಣವನ್ನ ಬಲಪಡಿಸಿಕೊಳ್ಳುವತ್ತ ಗಮನ ಹರಿಸ್ತಿದ್ದಾರೆ.

ಮೊನ್ನೆ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಪರಾಭಾವಗೊಂಡಿದ್ದ ಶ್ರೀನಿವಾಸ್ ಪ್ರಸಾದ್ ರಿಗೆ ಹೊಸ ಜವಾಬ್ದಾರಿಯನ್ನ ವಹಿಸಿದ್ದಾರೆ. ಕಾಂಗ್ರೇಸ್ ನಿಂದ ಬಿಜೆಪಿಗೆ ಬಂದು ಸೋತಿದ್ರೂ, ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ  ಮೈಸೂರು ಭಾಗವನ್ನ ಬಲಪಡಿಸಲು ಹಾಗು ದಲಿತರನ್ನ ಸೆಳೆಯುವ ದೃಷ್ಠಿಯಿಂದ  ಈ ನಿರ್ಧಾರ ಕೈಗೊಳ್ಳಲಾಗಿದೆ  ಎಂದು ಹೇಳಲಾಗುತ್ತಿದೆ.

ಆದ್ರೆ ಇನ್ನೊಂದು ಕಡೆ ಕೆ.ಎಸ್ ಈಶ್ವರಪ್ಪ ಅವ್ರಿಗೆ ತನ್ನ ತಾಕತ್ತಿನ ಪ್ರದರ್ಶನ ಮಾಡುವ ಸಲುವಾಗಿ ಶ್ರೀನಿವಾಸ್ ಪ್ರಸಾದ್ ಅವ್ರಿಗೆ ಈ ಹುದ್ದೆ ನೀಡಿದ್ದಾರೆ ಅನ್ನುವ  ಆರೋಪ ಕೇಳಿಬಂದಿದೆ. ಹೀಗಾಗಿ ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಬಿಎಸ್ ವೈ ಹಾಗು ಈಶ್ವರಪ್ಪ  ಇಬ್ಬರ ಕಾದಾಟ ಯಾವ ಸ್ವರೂಪ ಪಡ್ಕೊಳ್ಬಹುದು ಅನ್ನೋ ಲೆಕ್ಕಾಚಾರ ಅಂತೂ ಸೈಲೆಂಟಾಗೇ ಶುರುವಾಗಿದೆ.

Comments are closed.