ಬಾಹುಬಲಿ ಚಿತ್ರ ನೋಡಿ ಸುದೀಪ್ ಏನಂದ್ರು..?

ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ ದಿ ಕನ್ಕ್ಲೂಷನ್’ ಸಿನಿಮಾ ಭರ್ಜರಿ ಓಪನಿಂಗ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಯಾಗೋದೇ ಕಷ್ಟ ಎಂದುಕೊಳ್ಳಲಾಗಿತ್ತು. ಕೊನೆಗೆ ಎಲ್ಲಾ ಅಡೆತಡೆಗಳನ್ನ ಮೀರಿ ಬಾಹುಬಲಿ ಸಿನಿಮಾ ರಾಜ್ಯದಲ್ಲೂ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ.

ಬಾಹುಬಲಿ ದಿ ಬಿಗಿನಿಂಗ್ ಸಿನಿಮಾದಲ್ಲಿ ನಮ್ಮ ಕಿಚ್ಚ ಸುದೀಪ್ ಸಹ ಅಭಿನಯಿಸಿದ್ರು. ಆದ್ರೆ ಬಾಹುಬಲಿ ದಿ ಕನ್ಕ್ಲೂಷನ್ ಚಿತ್ರದಲ್ಲಿ ಅವರು ಕಾಣಿಸಿಕೊಂಡಿಲ್ಲ. ಇದೀಗ ಬಾಹುಬಲಿ ದಿ ಕನ್ಕ್ಲೂಷನ್ ಸಿನಿಮಾ ವೀಕ್ಷಿಸಿರೋ ಸುದೀಪ್ ಟ್ವೀಟ್ ಮಾಡಿ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಮೊದಲ ಬಾರಿಗೆ ಪ್ರೇಕ್ಷಕರು ಚಿತ್ರವೊಂದಕ್ಕೆ 5 ವರ್ಷ ಆಸಕ್ತಿ ಕಳೆದುಕೊಳ್ಳದೇ ಕಾದಿದ್ರು. ಆ ಕಾಯುವಿಕೆಗೆ ತಕ್ಕ ಸಿನಿಮಾ, ವರ್ತ್ ಎವರಿ ಸೆಕೆಂಡ್ ರಾಜಮೌಳಿ ಸರ್’ ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರೋ ಎಸ್ ಎಸ್ ರಾಜಮೌಳಿ, `ಥ್ಯಾಂಕ್ಸ್ ಅ ಲಾಟ್ ಸುದೀಪ್’ ಅಂತ ರಿಪ್ಲೈ ಮಾಡಿದ್ದಾರೆ. ಸುದೀಪ್ ಮತ್ತು ರಾಜಮೌಳಿಯ ಸ್ನೇಹ ಸಂಬಂಧ ಎಂಥದ್ದು ಅಂತ ಹೊಸದಾಗಿ ಹೇಳ್ಬೇಕಾಗಿಲ್ಲ. ರಾಜಮೌಳಿ ನಿರ್ದೇಶನದ ಈಗ ಸಿನಿಮಾದಲ್ಲಿ ಸುದೀಪ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ರು. ಆ ಚಿತ್ರಕ್ಕೆ, ಸುದೀಪ್ ಅಭಿನಯಕ್ಕೆ ಭರ್ಜರಿ ಪ್ರಶಂಸೆ ಸಿಕ್ಕಿತ್ತು. ಈಗ ಸಿನಿಮಾ ದೇಶ ವಿದೇಶದಲ್ಲೂ ಸೌಂಡ್ ಮಾಡಿತ್ತು. ಆ ನಂತ್ರ ಬಾಹುಬಲಿ ಮೊದಲ ಭಾಗದಲ್ಲಿ ಸುದೀಪ್ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.

ಸುದೀಪ್ ಮಾತ್ರವಲ್ಲದೇ ಭಾರತ ಚಿತ್ರರಂಗದ ಖ್ಯಾತನಾಮರು ಬಾಹುಬಲಿ ಸಿನಿಮಾ ನೋಡಿ ಚಿತ್ರತಂಡದ ಶ್ರಮವನ್ನ ಮೆಚ್ಚಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನ, ಪ್ರಭಾಸ್ ಅಭಿನಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಪ್ರಿನ್ಸ್ ಮಹೇಶ್ ಬಾಬು, ಕಾಲಿವುಡ್ ನಟ ಧನುಷ್ ಸೇರಿ ಸಾಕಷ್ಟು ಸೆಲೆಬ್ರೆಟಿಗಳು ಬಾಹುಬಲಿ ಸಿನಿಮಾಗೆ ಮನಸೋತಿದ್ದಾರೆ.

Comments are closed.