Mysore : ನಗರ ಪಾಲಿಕೆ ಸಿಬ್ಬಂದಿಗೆ ಇನ್ನಿಲ್ಲ ಫೋನ್‌ : ಬೇಕಾಬಿಟ್ಟಿ ಬಳಕೆ ಮಾಡಿದ್ದಕ್ಕೆ ಫ್ರೀ ಸಿಮ್‌ಗೆ ಕತ್ರಿ ..

ಮೈಸೂರು: ಮೈಸೂರು ನಗರ ಪಾಲಿಕೆ ಖಜಾನೆಗೆ ಪ್ರತಿತಿಂಗಳು ಸದಸ್ಯರ ಫೋನ್‌ ಬಿಲ್‌ ರೂಪದಲ್ಲಿ ಲಕ್ಷಾಂತರ ರೂಪಾಯಿ ಹೊರೆ ಬೀಳುತ್ತಿದ್ದ ಕಾರಣ, ಭಾನುವಾರದಿಂದ ನಗರಪಾಲಿಕೆ ವ್ಯಾಪ್ತಿಯ ಎಲ್ಲಾ 65 ವಾರ್ಡ್ ಗಳ ಸಿಯುಜಿ ನಂಬಂರ್ ಹಾಗೂ ಅಧಿಕಾರಿಗಳಿಗೆ ನೀಡಿದ ಸಿಮ್‌ನ್ನ ಸ್ಥಗಿತಗೊಳಿಸಲಾಗಿದೆ. ಸಿಯೂಜಿ ನಂಬರ್‌‌ಗಳ ಮೊಬೈಲ್ ಬಿಲ್ ಪ್ರತಿ ತಿಂಗಳು 2 ಲಕ್ಷ ದಾಟುತ್ತಿದ್ದು, ಬಿಲ್‌ ತುಂಬುವುದಕ್ಕಾಗಿ ಪಾಲಿಕೆ ರಾಜ್ಯ ಸರ್ಕಾರಕ್ಕೆ ಲೆಕ್ಕ ನೀಡುತ್ತಿತ್ತು.
ಇದು ಹೆಚ್ಚುವರಿ ಖರ್ಚು ಎಂದು ಪರಿಗಣಿಸಿದ ಸರ್ಕಾರ, ಎಲ್ಲ ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ಪೋನ್ ಸಂಪರ್ಕ ಕಡಿತಕ್ಕೆ ಆದೇಶ ನೀಡಿತ್ತು. ಸರ್ಕಾರದ ಆದೇಶದ ಮೇರೆಗೆ ಬಿಎಸ್‌ಎನ್‌ಎಲ್‌ ಗೆ ಪತ್ರ ಬರೆದ ಪಾಲಿಕೆ ಆಯುಕ್ತ ಜಿ. ಜಗದೀಶ್‌,  ತಮ್ಮ ನಂಬರ್ ಸೇರಿದಂತೆ 250 ಸಿಮ್ ಕಾರ್ಡ್ ಸಂಪರ್ಕ ಕಡಿತಗೊಳಿಸುವಂತೆ ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಮನವಿ ಮಾಡಿದ್ದರು. ಆಯುಕ್ತರಿಂದ ಪತ್ರ ಬಂದ ಹಿನ್ನೆಲೆಯಲ್ಲಿ ಬಿಎಸ್‌ಎನ್‌ಎಲ್‌ ಭಾನುವಾರದಿಂದ ಸಿಮ್ ಸೇವೆ ಸ್ಥಗಿತಗೊಳಿಸಿದೆ. ಇದರಿಂದ ಜನಸಾಮಾನ್ಯರ ಕೈಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಸಿಕ್ಕದಂತಾಗಿದೆ.

Comments are closed.

Social Media Auto Publish Powered By : XYZScripts.com