ಚಂದ್ರನ ಅಧ್ಯಯನಕ್ಕಾಗಿ ಸಧ್ಯದಲ್ಲಿಯೇ ಉಡಾವಣೆಯಾಗಲಿದೆ ಉಪಗ್ರಹ : ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್..

ಬಳ್ಳಾರಿ: ಚಂದ್ರನಲ್ಲಿರುವ ಪರಿಸರದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡುವ ಸಲುವಾಗಿ ಭಾರತ ಮತ್ತೊಂದು ಉಪಗ್ರಹವನ್ನು ಬರುವ ಒಂದು ವರ್ಷದೊಳಗೆ ಉಡಾವಣೆ ಮಾಡಲಿದ್ದು ಇದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯನಿ ಪೀಠದದಿಂದ ನೀಡುವ ವ್ಯೋಮರತ್ನ ಪ್ರಶಸ್ತಿಯನ್ನು ಸಿದ್ದಲಿಂಗ ಶಿವಾಚಾರ್ಯರಿಂದ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಚಂದ್ರನ ಪರಿಸರದ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಆದರೂ ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ತಾಪಮಾನ, ಮತ್ತು ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಮತ್ತಷ್ಟು ಅಧ್ಯಯನದ ಅವಶ್ಯ ಇದೆ. ಹೀಗಾಗಿ ಮತ್ತೊಂದು ಉಪಗ್ರಹವನ್ನು ಚಂದ್ರನ ಬಳಿಗೆ ಕಳುಹಿಸಲಿದ್ದೇವೆ ಎಂದರು.
ಅಲ್ಲದೆ, ಮುಂದಿನ ತಿಂಗಳು ಎರಡು ಟನ್ ಭಾರದ ಜಿಎಸ್‍ಎಲ್‍ವಿ ಮಾರ್ಕ್ 2 ಮತ್ತು ನಾಲ್ಕು ಟನ್ ಭಾರದ ಜಿಎಸ್‍ಎಲ್‍ವಿ  ಮಾರ್ಕ್ 3 ಉಪಗ್ರಹಗಳ ಉಡಾವಣೆ ಮಾಡಲಿದ್ದೇವೆ. ಅಲ್ಲದೆ 5 ಸಂಚಾರಿ ಉಪಗ್ರಹಗಳನ್ನು ಉಡಾವಣೆ ಮಾಡಲು ಸಿದ್ದತೆ ನಡೆಸಿದ್ದೇವೆ ಎಂದು ತಿಳಿಸಿದರು.

Comments are closed.

Social Media Auto Publish Powered By : XYZScripts.com