IPL: 67 ರನ್ ಗೆ ಆಲೌಟ್ ಡೆವಿಲ್ಸ್ | ಭರ್ಜಿರಿ ಜಯ ಸಾಧಿಸಿದ ಕಿಂಗ್ಸ್

ವೇಗಿ ಸಂದೀಪ್ ಶರ್ಮಾ ಅವರ ಶಿಸ್ತು ಬದ್ಧ ದಾಳಿಯ ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡ 67 ರನ್ ಗಳಿಗೆ ಆಲೌಟ್ ಆಯಿತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಕಿಂಗ್ಸ್‍ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಗೆದ್ದ ಪಂಜಾಬ್ ತಂಡ ಫೀಲ್ಡಿಂಗ್ ಮಾಡಲು ಮುಂದಾಯಿತು. ಕಿಂಗ್ಸ್ ತಂಡದ ಸಂದೀಪ್ ಶರ್ಮಾ ಅವರು ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿ ಗಮನ ಸೆಳೆದರು. ಮೊದಲ ಓವರ್ ನಿಂದಲೇ ಸಂದೀಪ್ ಬೆಂಕಿಯಂತ ಎಸೆತಗಳನ್ನು ಉತ್ತರಿಸಲು ಡೆವಿಲ್ಸ್ ಆಟಗಾರರು ಕಂಗಾಲಾದರು. ಸಂದೀಪ್ ಅವರು ಸ್ಯಾಮ್ ಬಿಲ್ಲಿಂಗ್ಸ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಕಗಿಸೋ ರಬಾಡ ಅವರ ವಿಕೆಟ್ ಬೇಟೆ ನಡೆಸಿದರು.

ವಿಕೆಟ್ ಪಡೆದ ಸಂಭ್ರಮದಲ್ಲಿ ಸಂದೀಪ್ ಶರ್ಮಾ

ಯುವ ಸ್ಪಿನ್ ಬೌಲರ್ ಅಕ್ಸರ್ ಪಟೇಲ್ ಹಾಗೂ ವರುಣ್ ಏರಾನ ತಾಲ ಎರಡು ವಿಕೆಟ್ ಪಡೆದರು. ಡೆಲ್ಲಿ ಪರ ಕರುಣ್ ನಾಯರ್ (11), ಕೋರಿ ಆಂಡರ್ಸನ್ (18), ಕಗಿಸೋ ರಬಾಡ (11) ಅವರನ್ನು ಹೊರತು ಪಡಿಸಿದರೆ ಬೇರೆಲ್ಲಾ ಬ್ಯಾಟ್ಸ್ ಮನ್ ಗಳು ಒಂದಂಕಿ ದಾಟಲಿಲ್ಲ. ಡೆಲ್ಲಿ ತಂಡ ಪ್ರಸಕ್ತ ಐಪಿಎಲ್ ನಲ್ಲಿ ಎರಡನೇ ಕನಿಷ್ಠ ಮೊತ್ತಕ್ಕೆ ಕುಸಿಯಿತು. ಇದಕ್ಕೂ ಮೊದಲು ಆರ್ ಸಿಬಿ ತಂಡ 49 ರನ್ ಗಳಿಗೆ ಆಲೌಟ್ ಆಗಿತ್ತು.

68 ರನ್ ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ 7.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 68 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

Comments are closed.

Social Media Auto Publish Powered By : XYZScripts.com