ನವಜಾತ ಮಗು ಅಪಹರಣ : ತಾಯಿಯ ಮಡಿಲಿನಿಂದ ಶಿಶುವನ್ನ ಹೊತ್ತೊಯ್ದ ಅಪರಿಚಿತೆ…

 ಚಿತ್ರದುರ್ಗ: ತಾಯಿಯ ಮಡಿಲಿನಲ್ಲಿದ್ದ ಮಗುವನ್ನ ಅಪರಿಚಿತ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ  ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.  ಚಿಕಿತ್ಸೆ ಕೊಡಿಸುವ ನೆಪದಲ್ಲಿ ಮಗುವನ್ನ ಅಪರಿಚಿತ ಮಹಿಳೆ ಹೊತ್ತೊಯ್ದಿದ್ದಿದ್ದಾಳೆ ಎಂದು ತಾಯಿ ಶೃತಿ ಆರೋಪಿಸಿದ್ದಾಳೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಾಟನಹಟ್ಟಿ ಗ್ರಾಮದ ಶೃತಿ ಹಾಗು ಚಿತ್ತಯ್ಯ ಎಂಬ ದಂಪತಿಗಳಿಗೆ ಹೆಣ್ಣು ಮಗು ಹುಟ್ಟಿ ಕೇವಲ 4 ದಿನಗಳು ಕಳೆದಿದ್ದು, ಸೋಮವಾರ ತಾಯಿ ಶೃತಿ ಮತ್ತು ಮಗು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದರು. ಚುಚ್ಚು ಮದ್ದು ಹಾಕಿಸಬೇಕೆಂದು ತಾಯಿಯ ಮಡಿಲಿನಿಂದ ಮಗುವನ್ನ ಎತ್ತಿಕೊಂಡ ಅಪರಿಚಿತೆ, ವೈದ್ಯರು ಕರೆಯುತ್ತಿದ್ದಾರೆಂದು ಹೇಳಿ ಮಗುವನ್ನ ಹೊತ್ತೊಯ್ದಿದ್ದಳು. ತಕ್ಷಣವೇ ತಾಯಿ ಶೃತಿ ಆಕೆಯ ಬೆನ್ನು ಹತ್ತಿದ್ದಳಾದರೂ, ತಾಯಿಯ ಕಣ್ಣುತಪ್ಪಿಸಿ ಮಗುವನ್ನ ಎತ್ತಿಕೊಂಡು ಹೋಗಿದ್ದಾಳೆ.  ಚಿತ್ರದುರ್ಗ ನಗರ ಠಾಣೆಯಲ್ಲಿ ಈಗ ಅಪಹರಣ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com