ಬ್ಲ್ಯಾಕ್‌ ಅಂಡ್‌ ವೈಟ್‌ ಪ್ರಕರಣ: 7 ಮಂದಿ ಆರೋಪಿಗಳ ಬಂಧನ: 96.9 ಲಕ್ಷ ಹಳೆನೋಟುಗಳು ವಶಕ್ಕೆ.

ಬೆಂಗಳೂರು: ಬೆಂಗಳೂರಿನಲ್ಲಿ ಇನ್ನೂ ಬ್ಲ್ಯಾಕ್ ಆಂಡ್ ವೈಟ್ ದಂದೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಏಳು ಮಂದಿ ಆರೋಪಿಗಳ ಬಂಧನವಾಗಿದೆ. ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ವ್ಯವಹಾರ ನಡೆಸುತ್ತಿದ್ದ ಏಳು ಜನರ ಗುಂಪನ್ನ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
500 ಮತ್ತು 1000 ಮುಖಬೆಲೆಯ 96.9 ಲಕ್ಷ  ಹಳೆನೋಟುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಮುಖ ಆರೋಪಿಗಳಾದ ರಾಮ್ ದಾಸ್ ಮತ್ತು ಸುಧಾ ಪರಾರಿ ಪೊಲೀಸರ ಕಣ್ತಪ್ಪಿಸಿ, ಪರಾರಿಯಾಗಿದ್ದಾರೆ.  ಬಂಧಿತರು ಶಿವಪ್ರಸಾದ್ , ಮಂಜುನಾಥ್ , ಪ್ರದೀಪ್, ಅಬ್ದುಲ್ ರೆಹೆಮಾನ್, ರವಿಕುಮಾರ್, ಶಿವಲಿಂಗಪ್ಪ ಎಂಬ ಹೆಸರಿನವರಾಗಿದ್ದಾರೆ. ಪರಾರಿಯಾದ ಇಬ್ಬರು ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ.

Comments are closed.

Social Media Auto Publish Powered By : XYZScripts.com