ರೇಣುಕಾಚಾರ್ಯ, ಗೋ.ಮಧುಸೂಧನ್‌ ಎಲ್ಲ ಜವಾಬ್ಧಾರಿಗಳಿಂದ ಔಟ್‌ : ಎನ್‌.ರವಿಕುಮಾರ್‌..

ಬೆಂಗಳೂರು: ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ ರೇಣುಕಾಚಾರ್ಯ ಹಾಗೂ ರಾಜ್ಯ ವಕ್ತಾರರಾದ  ಗೋ. ಮಧುಸೂದನ್‌ ಈ ಇಬ್ಬರು ನಾಯಕರನ್ನ ಬಿಜೆಪಿಯ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌ ರವಿಕುಮಾರ್‌ ನಿರ್ಧಾರ ತೆಗೆದುಕೊಂಡಿದ್ದು, ಭಾನುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಈ ಇಬ್ಬರು ನಾಯಕರುಗಳ ಜತೆಯಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀ ಭಾನುಪ್ರಕಾಶ, ಶ್ರೀ ನಿರ್ಮಲಕುಮಾರ್ ಸುರಾಣ, ಈ ಇಬ್ಬರಿಂದಲೂ ಎಲ್ಲ ಜವಾಬ್ದಾರಿಗಳನ್ನೂ ಹಿಂಪಡೆಯಲಾಗಿದೆ ಎಂಬುದು ರವಿಕುಮಾರ್‌ ನೀಡಿರುವ ಪ್ರಕಟಣೆಯಲ್ಲಿ ಉಲ್ಲೇಖವಾಗಿದೆ.  ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ನೆಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜ್ಯ ಜಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಈ ನಿರ್ಣಯಕ್ಕೆ ಬಂದಿದ್ದಾರೆ ಎಂಬುದನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Comments are closed.

Social Media Auto Publish Powered By : XYZScripts.com