ಹಣಕಾಸಿನ ವ್ಯಾಜ್ಯಕ್ಕಾಗಿ ವ್ಯಕ್ತಿ ಕೊಲೆ: ಬೈಕ್‌ ಸಮೇತ ಆತನನ್ನ ಸುಟ್ಟು ಹಾಕಿದ ದುಷ್ಕರ್ಮಿಗಳು..

ಬಳ್ಳಾರಿ : ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ನಂತರ ಆತನ ಬೈಕ್ ಸಮೇತ ಸುಟ್ಟು ಹಾಕಿರಯವ ಘಟನೆ ಬಳ್ಳಾರಿ ನಗರ ಹೊರವಲಯದ ಸಿರಗುಪ್ಪ ರಸ್ತೆಯ ಬಳಿ ಶನಿವಾರ ತಡರಾತ್ರಿ ನಡೆದಿದೆ.
ಬಳ್ಳಾರಿ ನಗರವಾಸಿ ವೆಂಕಟರಾಮರೆಡ್ಡಿ ಎಂಬಾತನೇ ಕೊಲೆಗೀಡದ ವ್ಯಕ್ತಿಯಾಗಿದ್ದು, ಹಣಕಾಸಿನ ವ್ಯವಹಾರದ ಸಂಬಂಧ ಉಂಟಾದ ವ್ಯಾಜ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. ಬಡ್ಡಿ ವ್ಯವಹಾರ ಮಾಡುತ್ತಿದ್ದ ವೆಂಕಟರಾಮರೆಡ್ಡಿಯ ವಿರೋಧಿಗಳು ಈ ಕೊಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ.  ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com