ವಿಮ್ಸ್ ವೈದ್ಯನ ಮೇಲೆ ಲೈಂಗಿಕ ಆರೋಪ: ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ

ಬಳ್ಳಾರಿ: ಬಳ್ಳಾರಿ ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್ ) ಆಡಿಯೋಲಜಿ ವಿಭಾಗದ ವೈದ್ಯ ಡಾ.ಸೋಮಣ್ಣ ಎಂಬುವವರ ಮೇಲೆ ಲೈಂಗಿಕ ಕಿರುಕುಳದ ಆರೋಪ  ಕೇಳಿಬಂದಿದ್ದು, ಶನಿವಾರ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
  ಸುನೀತಾ ಎಂಬ ಮಹಿಳೆ ವೈದ್ಯ ಸೋಮಣ್ಣರ ಮೇಲೆ ದೂರು ನೀಡಿದ್ದು, ತಮ್ಮ ಮಗನಿಗೆ ಕಿವಿ ಕೇಳಿಸುತ್ತಿಲ್ಲ ಎಂದು ತಪಾಸಣೆ ಮಾಡಿ ಪ್ರಮಾಣ ಪತ್ರ ಪಡೆಯಲು ಬಂದಾಗ, ವೈದ್ಯ ಸೋಮಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಮುಂದಾಗಿದ್ದರು ಎಂದು ಆರೋಪಿಸಿದ್ದಾಳೆ. ಮಹಿಳಾ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.