ರಾಜ್ಯ ಸರ್ಕಾರದ ವತಿಯಿಂದ ಬಸವೇಶ್ವರ ಜಯಂತಿ :‘ಬಸವ ವಚನ ವಾಹಿನಿ’ ಸ್ತಬ್ದಚಿತ್ರ ಮೆರವಣಿಗೆ

ಬೆಂಗಳೂರು: ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಶನಿವಾರ ಬಸವೇಶ್ವರ ಜಯಂತಿ ಆಚರಿಸಲಾಗಿದ್ದು,  ಸಚಿವ ಈಶ್ವರ್ ಖಂಡ್ರೆ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಕೆ.ಜೆ ಜಾರ್ಜ್, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ,  ಬಸವೇಶ್ವರ ಪ್ರತಿಮೆಗೆ ಪುಷ್ಮನಮನ ಸಲ್ಲಿಸಿದರು . ನಂತರ ಬಸವ ವಚನ ವಾಹಿನಿ ಹೆಸರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಜೆ ಜಾರ್ಜ್‌, ಬಸವಣ್ಣ ತತ್ವ ಸರ್ವಕಾಲಿಕ ಸತ್ಯವಾದದ್ದು, ಇದು ಯಾವಾಗಲೂ ಚಾಲ್ತಿಯಲ್ಲಿರುತ್ತದೆ, ಬಸವಣ್ಣ ವಚನಗಳನ್ನ   ನಾವೆಲ್ಲರು ಪಾಲಿಸಬೇಕು‌ ಎಂದರು.  ಬಿಜೆಪಿ ಆಂತರಿಕ ಕಿತ್ತಾಟ ವಿಚಾರದ ಕುರಿತು ಮಾತನಾಡಿ, ಬೇರೆ ಪಕ್ಷಗಳ ಕಿತ್ತಾಟದ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲ. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ಹೇಗಿರಬೇಕು ಎಂದು ನಾಯಕರಿಗೆ ಗೊತ್ತಿರಬೇಕು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಬಹಿರಂಗವಾಗಿ ಕಚ್ಚಾಟ ಮಾಡುತ್ತಿರುವುದು ಸರಿ ಇಲ್ಲ ಎಂದು ಅಭಿಪ್ರಾಯಪಟ್ಟರು.

Comments are closed.

Social Media Auto Publish Powered By : XYZScripts.com