ಅಂಬರೀಷ್‌ರನ್ನ ಶಾಸಕ ಸ್ಥಾನದಿಂದ ವಜಾಗೊಳಿಸಿ : ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್‌.ಗೌಡ

ಮಂಡ್ಯ:
ಶಾಸಕ ಅಂಬರೀಷ್‌ರನ್ನ ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ಜೆಡಿಯು ಮಂಡ್ಯ ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ದೂರು ನೀಡಿದ್ದಾರೆ.ವಿಧಾನಸೌಧದಲ್ಲಿ ಇವರು ದೂರು ನೀಡಿದ್ದು, ಬಿ.ಎಸ್‌.ಗೌಡ ನೀಡಿದ ದೂರನ್ನ ಸ್ವೀಕರ್‌ ಕೋಳಿವಾಡ ಸ್ವೀಕರಿಸಿದ್ದಾರೆ.
ಸಚಿವ ಸಂಪುಟದಿಂದ ಕೈಬಿಟ್ಟ ನಂತರ ಅಂಬರೀಷ್‌ ಯಾವುದೇ ಅಧಿವೇಶನದಲ್ಲಿ ಭಾಗವಹಿಸದೆ, ತಾನು ಓರ್ವ ಜನಪ್ರತಿನಿಧಿ ಎಂಬುದನ್ನೇ ಮರೆತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Comments are closed.