ಬಾಹುಬಲಿ ಅಬ್ಬರ : ಕನ್ನಡ ಚಿತ್ರ ರಾಗ ತಿಯೇಟರ್​​ರಿಂದ ಎತ್ತಂಗಡಿ, ಎಲ್ಲಿರುವಿರಿ ಹೋರಾಟಗಾರರೆ…

ಪರಭಾಷ ಸಿನಿಮಾಗಳ ದಾಳಿ  ಕನ್ನಡ ಚಿತ್ರರಂಗದ ಮೇಲೆ ಬಹಳಷ್ಟು ವರ್ಷಗಳಿಂದ ನಡೆಯುತ್ತಲೇ ಇದೆ.. ಅದ್ರಲ್ಲೂ ಬಾಹುಬಲಿ ಸಿನಿಮಾ ಬಂದಾಗಲಂತು ಕನ್ನಡದಲ್ಲಿ ರಿಲೀಸ್ ಆಗಿದ್ದ ಸಿನಿಮಾಗಳೆಲ್ಲಾ ಸುದ್ದಿಯೇ ಇಲ್ಲದೆ ಥಿಯೇಟರ್​ನಿಂದ ಎತ್ತಂಗಡಿ ಆಗುತ್ತಿವೆ. ಇದೀಗ ಬಾಹುಬಲಿ-2 ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಕನ್ನಡದ ವಿಭಿನ್ನ ಚಿತ್ರ ರಾಗ ಕೂಡ ಬಾಹುಬಲಿಗೆ ಬಲಿಯಾಗಿದೆ.

ಈ ಕುರಿತು ‘ರಾಗ’ ಚಿತ್ರದ ನಿರ್ದೇಶಕ ಪಿ.ಸಿ ಶೇಖರ್ ವಿಡಿಯೋವೊಂದನ್ನ ಮಾಡಿ ಫೇಸ್ ಬುಕ್ ನಲ್ಲಿ ತಮ್ಮ ನೋವನ್ನ ಹೊರಹಾಕಿದ್ದಾರೆ. ಸುಮಾರು 65 ಚಿತ್ರಮಂದಿಗಳಲ್ಲಿ ‘ರಾಗ’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದ್ರೆ, ಒಂದೇ ವಾರದಲ್ಲಿ ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾವನ್ನ ತೆಗೆಯುತ್ತಿದ್ದಾರೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ರಾಗ ಚಿತ್ರ ನಿರ್ಮಾಪಕ ಕಮ್ ನಟ ಮಿತ್ರ ತಮ್ಮ ಸಿನಿಮಾ ಚೆನ್ನಾಗಿದ್ದರು ಬಾಹುಬಲಿ-2 ಚಿತ್ರಕ್ಕಾಗಿ ರಾಗ ಸಿನಿಮಾವನ್ನ ತಿಯೇಟರ್​​ರಿಂದ ಎತ್ತಂಗಡಿ ಮಾಡಿದ್ರಿಂದ ಬೇಸರಗೊಂಡಿದ್ದಾರೆ.ಕನ್ನಡ ನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಗ್ತಿಲ್ಲ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ರು..

 

ರಾಗ ಚಿತ್ರತಂಡ ದೂರನ್ನ ಕೇಳಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ ಗೋವಿಂದು  ಮಲ್ಟಿಫ್ಲೆಕ್ಸ್​ ಮಾಲೀಕರಿಗೆ ಭಾನುವಾರದ ವರೆಗೆ ಎಲ್ಲಾ ಮಲ್ಟಿಪ್ಲೆಕ್ಸ್​​ಗಳಲ್ಲಿ ಪ್ರತಿನಿತ್ಯ ಒಂದು ಶೋ ನೀಡೋಕೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ರಾಗ ಜೊತೆಗೆ ಅಪ್ಪು ಅಭಿನಯಿಸಿರುವ ರಾಜಕುಮಾರ ಮತ್ತು ದರ್ಶನ್ ಅಭುನಯದ ಚರ್ಕವರ್ತಿ ಕೂಡಾ ಬಾಹುಬಲಿಗಾಗಿ ತಿಯೇಟರ್​​ರಿಂದ ಎತ್ತಂಗಡಿಯಾಗಿವೆ….

Comments are closed.

Social Media Auto Publish Powered By : XYZScripts.com