IPL: ಲಯನ್ಸ್ ಆಟಕ್ಕೆ ಬೆಚ್ಚಿದ ಆರ್ ಸಿಬಿ | ಕ್ಷೀಣಿಸಿದ ಪ್ಲೇ ಆಫ್ ಕನಸು

ತವರಿನಲ್ಲಿ ಕೊಹ್ಲಿ ಪಡೆಯ ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮತ್ತೊಮ್ಮೆ ಅನಾವರಣವಾಗಿದೆ. ಬರೀ ಸ್ಟಾರ್ ಗಳ ಹೆಸರಿನಿಂದ ಎದುರಾಳಿಗಳನ್ನು ನಡುಗಿಸಲು ಅಸಾಧ್ಯ ಎಂಬುದು ಅಭಿಮಾನಿಗಳು ಅರಿವಾಗಿದೆ. ಹತ್ತನೇ ಆವೃತ್ತಿ ಐಪಿಎಲ್‌ನಲ್ಲಿ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಕಮರುವಂತೆ ಕಾಣುತ್ತಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ೨೦ ಓವರ್ ಗಳಲ್ಲಿ ೧೩೪ ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ ೧೩.೫ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ ಮಾಡಿದ ಆರ್‌ಸಿಬಿ ತಂಡ ತನ್ನ ಬ್ಯಾಟಿಂಗ್ ಖದರ್ ತೋರಿಸುವಲ್ಲಿ ವಿಫಲವಾಯಿತು. ಕೆಕೆಆರ್ ವಿರುದ್ಧದ ಪಂದ್ಯದ ರೀತಿ ಬ್ಯಾಟ್ ಮಾಡಿದ ಬೆಂಗಳೂರು ತಂಡದ ಆಟಗಾರರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಹಿಂದೆ ಬಿದ್ದರು. ಟೈ ಹಾಗೂ ಥಂಪಿ ಅವರ ಶಿಸ್ತು ಬದ್ಧ ದಾಳಿಗೆ ಕೊಹ್ಲಿ ಪಡೆಯ ಸ್ಟಾರ್ ಆಟಗಾರರು ಪೆವಿಲಿಯನ್ ಪೆರೆಡ್ ನಡೆಸಿದರು.

ಆರಂಭಿಕ ಕ್ರಿಸ್ ಗೇಲ್ ೮, ವಿರಾಟ್ ಕೊಹ್ಲಿ ೧೦, ಎಬಿ ಡಿವಿಲಿಯರ್ಸ್ ೪, ಟ್ರಾವಿಸ್ ಹೆಡ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

ಕೇದಾರ್ ಜಾದವ್ ಅವರು ಮಾತ್ರ ತಮ್ಮ ಕ್ಷಮತೆಗೆ ತಕ್ಕ ಆಟ ಆಡಿ ೧೮ ಎಸೆತದಲ್ಲಿ ೩೧ ರನ್ ಬಾರಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ ಪವನ್ ನೇಗಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಭರವಸೆ ಮೂಡಿಸಿದರೂ ೩೨ ರನ್‌ಗಳಿಸಿದ್ದಾಗ ಔಟಾದರು.

ಗೆಲುವಿನ ಗುರಿಯನ್ನು ಬೆನ್ನಟ್ಟಿದ ಲಯನ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಬೆಂಗಳೂರು ತಂಡದ ಆಸೆ ಫಲಿಸಲಿಲ್ಲ. ಏರಾನ್ ಫಿಂಚ್ ಹಾಗೂ ನಾಯಕ ಸುರೇಶ್ ರೈನಾ ಅವರ ಜವಾಬ್ದಾರಿಯುತ ಜೊತೆಯಾಟದ ನೆರವಿನಿಂದ ಗುಜರಾತ್ ಮೂರನೇ ಜಯ ದಾಖಲಿಸಿತು. ಫಿಂಚ್ ತಮ್ಮ ನೈಜರಿತಿಯ ಆಟ ಆಟಿ ಗಮನ ಸೆಳೆದರು. ಇವರು ೩೪ ಎಸೆತದಲ್ಲಿ ೫ ಬೌಂಡರಿ, ೬ ಸಿಕ್ಸರ್ ಸಹಾಯದಿಂದ ೭೨ ರನ್ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಗೆಲುವಿನ ಅಗತ್ಯ ರನ್ ಕಲೆ ಹಾಕಿ ಮಿಂಚಿದರು.

Comments are closed.

Social Media Auto Publish Powered By : XYZScripts.com