ಔಷಧ ವಂಚನೆ ಪಕ್ರರಣ : ಇಬ್ಬರು ನಕಲಿ ಆಯುರ್ವೇದ ವೈದ್ಯರ ಬಂಧನ ….

ಹುಬ್ಬಳ್ಳಿ:   ನಕಲಿ ಆಯುರ್ವೇದದ ಔಷಧಿ ಕೊಟ್ಟು ವಂಚನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಶುಕ್ರವಾರ ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸಿದ್ದಾರೆ. ಶಿವಾನಂದ ಕಾಡಪ್ಪ ಚಿಕ್ಕೋಡಿ (40), ವೆಂಕಟೇಶ ಗೋವಿಂದಪ್ಪ ಗೊಲ್ಲರ( 22)  ಎಂಬ ಇಬ್ಬರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 1 ಲಕ್ಷ 7 ಸಾವಿರ ರೂಪಾಯಿ ನಗದು, ಆಯುರ್ವೇದ ಔಷಧಿಗಳು, ಮತ್ತು ಮೂರು ಮೊಬೈಲ್‌ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಔಷಧಿ ನೀಡುವುದಾಗಿ ಹೇಳಿ ಉದಯಗಿರಿಯ ಕಮಲಾ ಭಟ್ಟ ಎಂಬುವವರಿಂದ ಮೂರು ಲಕ್ಷ ರೂಪಾಯಿಗಳ ಚೆಕ್‌ ಪಡೆದುಕೊಂಡಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಸ್ವತಃ ಕಮಲಾ ಭಟ್ಟ ದೂರು ದಾಖಲಿಸಿದ್ದರು.  ದೃಷ್ಠಿ ಸಮಸ್ಯೆಯಿಂದ ಬಳಲುತ್ತಿರುವ ಕಮಲಾ ಅವರ ಪತಿಗೆ ದೃಷ್ಠಿ ಬರುವಂತೆ ಮಾಡುತ್ತೇವೆ ಎಂದು ನಂಬಿಸಿ ಅವರಿಂದ ಹಣ ಪಡೆದಿದ್ದರು ಎನ್ನಲಾಗಿದೆ. ಕಮಲಾ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ಜೋಡಿ ಜನರಿಗೆ ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Comments are closed.