ಈಶ್ವರಪ್ಪvs ಯಡಿಯೂರಪ್ಪ: ಮಾತನಾಡಲು ಹಿಂದೇಟು ಹಾಕಿದ ಅನಂತ್‌ಕುಮಾರ್‌, ಸದಾನಂದಗೌಡ

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ನಡುವೆ ಕಿತ್ತಾಟ ನಡೆಯುತ್ತಿರುವ ಹಿನ್ನಲೆಯಲ್ಲಿ,  ಕೇಂದ್ರ ಸಚಿವರುಗಳಾದ ಅನಂತಕುಮಾರ್‌ ಮತ್ತು ಸದಾನಂದಗೌಡ ಮಾಧ್ಯಮಗಳ ಮುಂದೆ ಈ ವಿಷಯವಾಗಿ ಮಾತನಾಡಲು ಹಿಂದೇಟು ಹಾಕಿದ್ದಾರೆ. ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಿರಿಧಾನ್ಯ ಮೇಳ ಉದ್ಘಾಟನೆಗೆ ಬಂದಿದ್ದ ಈ ಇಬ್ಬರು ಕೇಂದ್ರ ಸಚಿವದ್ವಯರು, ಬಿಜೆಪಿಯೊಳಗೆ ನಡೆಯುತ್ತಿರುವ ಕಿತ್ತಾಟಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ ಎಂಬ ವಿಷಯಕ್ಕೆ ಮಾಧ್ಯಮ ಪ್ರತಿನಿಧಿಗಳಿಂದ ನುಣುಚಿಕೊಂಡು ಹೋಗಿದ್ದಾರೆ.
ಸಿರಿಧಾನ್ಯ ಮೇಳ ಉದ್ಘಾಟನೆ ಗೆ ಬಂದಿದ್ದೇವೆ, ಹೀಗಾಗಿ ಇದರ ಬಗ್ಗೆ ಮಾತ್ರ ಮಾತನಾಡುತ್ತೇವೆ, ಬೇರೆ ಇನ್ಯಾವ ವಿಷಯಗಳ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಅನಂತಕುಮಾರ್‌ ಸ್ಪಷ್ಟಪಡಿಸಿದರೆ, ಯಾವುದೇ ವಿಷಯಗಳನ್ನ ಮಾತನಾಡುವುದಕ್ಕೆ ಪಕ್ಷದ ವಕ್ತಾರರು ಇದ್ದಾರೆ ಎಂದಷ್ಟೇ ಹೇಳಿ ನುಣುಚಿಕೊಂಡರು ಸದಾನಂದಗೌಡ.  ಈಶ್ವರಪ್ಪ, ಯಡಿಯೂರಪ್ಪ ಕಿತ್ತಾಟದಿಂದ ಬಿಜೆಪಿಯ ಉಭಯ ನಾಯಕರುಗಳಿಗೆ ಧರ್ಮಸಂಕಟವಾಗಿದ್ದು, ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಮಾಧ್ಯಮಗಳ ಮುಂದೆ

Comments are closed.