ಬಳ್ಳಾರಿಯಲ್ಲಿ ಬಿರುಗಾಳಿ ಮಳೆ : ಬಿರುಗಾಳಿಗೆ ಸಿಲುಕಿ 55 ಕುರಿಗಳ ಸಾವು…

ಬಳ್ಳಾರಿ: ಗುರುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ 55 ಕುರಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಯನಿ ಗ್ರಾಮದಲ್ಲಿ ನಡೆದಿದೆ. ಉಜ್ಜಯನಿ ಗ್ರಾಮದ ಬಳಿ ಕುರಿ ಸಾಕಾಣಿಕೆಗೆ ಜಮೀನಿನಲ್ಲಿ ಕೂಡಿ ಹಾಕಿದ್ದ ಕುರಿಗಳು ರಾತ್ರಿಯ ಬಿರುಗಾಳಿಗೆ ಸಿಲುಕಿ ಮೃತಪಟ್ಟಿವೆ.  ಪಕ್ಕೀರಪ್ಪ ಎಂಬುವವರ ಸೇರಿದ ಕುರಿಗಳಾಗಿದ್ದು, ದೊಡ್ಡ ದೊಡ್ಡ ಹನಿಗಳ ಬಿರುಗಾಳಿ ಮಳೆಯ ಕಾರಣದಿಂದ ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ.
ಬೆಳಿಗ್ಗೆ ಕುರಿಗಳು ಸತ್ತಿರುವುದನ್ನು ನೋಡಿದ ಜನತೆ ಮರುಗಿದ್ದು, ಜಮೀನಿನಲ್ಲಿ ಕುರಿಗಳ ಜತೆ ಇದ್ದ ಪಕ್ಕೀರಪ್ಪ ದೊಡ್ಡ ಹನಿಯ ಬಿರುಗಾಳಿ ಮಳೆಗೆ ಸಿಕ್ಕು ಬದುಕಿದ್ದೇ ಅದೃಷ್ಟದ ವಿಷಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳಕ್ಕೆ  ಪಶುಸಂಗೋಪನೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿರು ಬಿಸಲಿನ ತಾಪದಿಂದ ಬೇಸತ್ತಿದ್ದ ಜನತೆಗೆ ಗುರುವಾರ ಸುರಿದ ಮಳೆ ತಂಪು ನೀಡಿದರೂ, ಹಲವು ಅನಾಹುತಗಳಿಗೂ ಕಾರಣವಾಯಿತು

Comments are closed.

Social Media Auto Publish Powered By : XYZScripts.com