ಉಡಾನ್ ಯೋಜನೆಗೆ ಚಾಲನೆ:ಬಡವರು ಸಹ  ವಿಮಾನದಲ್ಲಿ ಪ್ರಯಾಣ ಮಾಡುವಂತಾಗಬೇಕು: ಮೋದಿ…

ಶಿಮ್ಲಾ:ಏ :  ಕಡಿಮೆ ಪ್ರಯಾಣದರದಲ್ಲಿ ಜನಸಾಮಾನ್ಯರಿಗೂ ವಿಮಾನಯಾನ ಸೌಲಭ್ಯಗಳನ್ನು ಒದಗಿಸುವುದು ‘ಉಡಾನ್‌’ ಯೋಜನೆಯ ಉದ್ದೇಶವಾಗಿದೆ. ಭಾರತದಲ್ಲಿ ಹವಾಯಿ ಚಪ್ಪಲಿಯಲ್ಲಿ ನಡೆದಾಡುವವರೂ ಸಹ ವಿಮಾನದಲ್ಲಿ ಪ್ರಯಾಣ ಮಾಡುವಂತಾಗಬೇಕು ಎಂಬುದು ನನ್ನ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಜುಬರ್ಹಾಟಿಯಲ್ಲಿ ಶಿಮ್ಲಾ-ನವದೆಹಲಿ ನಡುವಿನ ಉಡಾನ್ ವಿಮಾನ ಹಾರಾಟ ಯೋಜನೆಗೆ ಚಾಲನೆ ನೀಡಿದ ಅವರು,ಕಡಿಮೆ ಪ್ರಯಾಣದರದಲ್ಲಿ ಜನಸಾಮಾನ್ಯರಿಗೂ ವಿಮಾನಯಾನ ಸೌಲಭ್ಯಗಳನ್ನು ಒದಗಿಸುವುದು ‘ಉಡಾನ್‌’ ಯೋಜನೆಯ ಉದ್ದೇಶವಾಗಿದೆ ಎಂದರು. ಈ ಯೋಜನೆಯು ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ. ಅಭಿವೃದ್ಧಿಯ ಒಂದು ಭಾಗವಾಗಿ ವಾಯು ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಗತ್ಯವಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಯೋಜನೆಯಿಂದ ವಿಮಾನ ಪ್ರಯಾಣ ದರ ಟ್ಯಾಕ್ಸಿ ಪ್ರಯಾಣ ದರಕ್ಕಿಂತಲೂ ಕಡಿಮೆಯಾಗಲಿದೆ. ಇದರಿಂದಾಗಿ ಮದ್ಯಮವರ್ಗದ ಜನರ ಆಕಾಂಕ್ಷೆಗಳು ಹಾಗೂ ಜೀವನಶೈಲಿಗಳಲ್ಲಿ ಬದಲಾವಣೆಗಳಾಗಲಿವೆ ಎಂದರು. ಪ್ರಾದೇಶಿಕವಾಗಿ ವಾಯು ಸಂಪರ್ಕ ಕಲ್ಪಿಸುವ ಉಡಾನ್ ಯೋಜನೆ ಅಡಿಯಲ್ಲಿ ಒಂದು ಸೀಟಿಗೆ, ಒಂದು ಗಂಟೆ ಪ್ರಯಾಣಕ್ಕೆ 2,500 ದರ ನಿಗದಿಪಡಿಸಲಾಗಿದೆ. ಇದು ಅಂದಾಜು 500 ಕಿಲೋ ಮೀಟರ್‌ಗೆ ಅನ್ವಯವಾಗಲಿದೆ. ಇನ್ನು ಇದೇ ಸಂದರ್ಭದಲ್ಲಿ ಕಡಪಾ-ಹೈದರಾಬಾದ್ ಮತ್ತು ನಾಂದೇಡ್-ಹೈದರಾಬಾದ್ ಉಡಾನ್ ಹಾರಾಟಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.

Comments are closed.

Social Media Auto Publish Powered By : XYZScripts.com