ತೆರೆದ ಕೊಳವೆ ಬಾವಿ ಮುಚ್ಚಿಸಲು ವಿನೂತನ ಪ್ರಯತ್ನ ಕೈಗೊಂಡಿರುವ ರೈತ :500 ರೂ ಬಹುಮಾನ..!

 ಕೊಪ್ಪಳ : ಕೊಪ್ಪಳ ಜಿಲ್ಲೆಯಾದ್ಯಂತ ತೆರೆದ ಕೊಳವೆ ಬಾವಿ ಮುಚ್ಚಿದವರಿಗೆ 500 ರೂಪಾಯಿಗಳ ಬಹುಮಾನ ನೀಡುತ್ತೇನೆ ಎಂದು ಘೋಷಿಸುವ ಮೂಲಕ ತೆರೆದ ಕೊಳವೆ ಬಾವಿ ಮುಚ್ಚಲು ರೈತರೊಬ್ಬರು ನೂತನ ಪ್ರಯತ್ನ ಕೈಗೊಂಡಿದ್ದಾರೆ. ಅಲ್ಲದೆ, ಮೊದಲ 200 ತೆರೆದ ಕೊಳವೆಬಾವಿಗಳನ್ನ ಮುಚ್ಚಿದವರಿಗೆ ಒಂದುಲಕ್ಷ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ್ದು, ಈ ಬಹುಮಾನಕ್ಕೋಸ್ಕರ ಗುರುವಾರ ಬ್ಯಾಂಕಿನಲ್ಲಿ ತನ್ನ ಹಣವನ್ನ ಠೇವಣಿಯಾಗಿ ಇಟ್ಟಿದ್ದಾರೆ ಈ ಪ್ರಗತಿಪರ ರೈತ ಶಿವಪ್ಪ. ⁠⁠⁠⁠
 ಈತ ಗಂಗವಾತಿಯ ಶಿವಪ್ಪ ಚಳ್ಳಿಕೇರಿ ಎಂಬ ರೈತನಾಗಿದ್ದು, ಮೊನ್ನೆಯಷ್ಟೇ ಬೆಳಗಾವಿಯ ಝಂಜರವಾಡದಲ್ಲಿ 6 ವರ್ಷದ ಬಾಲಕಿ ಕಾವೇರಿ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಜನತೆಯನ್ನ ಎಚ್ಚರಿಸುವುದಕ್ಕಾಗಿ ರೈತ ಈ ಕಾರ್ಯ ಕೈಗೊಂಡಿದ್ದಾರೆ.  ಕಾವೇರಿ ಮೃತಪಟ್ಟ ವಿಷಯದಿಂದ ಅತೀವ ನೊಂದಿದ್ದ ಶಿವಪ್ಪ, ಸ್ವತಃ ತೆರೆದ ಕೊಳವೆ ಬಾವಿಯನ್ನ ಮಚ್ಚಿಸುವುದಕ್ಕಾಗಿ ಮುಂದಾಗಿದ್ದಾರೆ. ತೆರೆದ ಕೊಳವೆ ಬಾವಿಯನ್ನ ಮುಚ್ಚಿದವರು, ಗ್ರಾಮ ಪಂಚಾಯತ್ ಹಾಗೂ ನಗರಸಭೆಯಿಂದ ಧೃಡಿಕೃತ ಪ್ರಮಾಣಪತ್ರವನ್ನ ನೀಡಿದರೆ,  500 ರೂ ಬಹುಮಾನ ನೀಡುತ್ತೇನೆ ಎಂದು ಶಿವಪ್ಪ ಹೇಳಿದ್ದಾರೆ.
ಬುಧವಾರ ಸ್ವತಃ ಕೊಪ್ಪಳದಲ್ಲಿ ಶಿವಪ್ಪ ಹಾಗೂ ಆತನ ಸ್ನೇಹಿತರು ತೆರದ ಕೊಳುವೆ ಬಾವಿಯನ್ನು ಮುಚ್ಚಿದ್ದಾರೆ. ಇನ್ನು ನಗರದ ದಿವಟರ್ ಬಡವಾಣೆ ಬಳಿ ಇದ್ದ ತೆರದ ಕೊಳವೆ ಬಾವಿಯನ್ನು ಮುಚ್ಚಿದ ವೃದ್ದ ಕರಿಯಪ್ಪನಿಗೆ ಮೊದಲ ಬಹುಮಾನವಾಗಿ ಐದನೂರು ರೂಪಾಯಿ ನೀಡಲಾಗಿದೆ. ಇದಲ್ಲದೆ ಶಿವಪ್ಪ ಚಳ್ಳಿಕೇರಿ ಮತ್ತು ಅವರ ಸ್ನೇಹಿತರ ಗುಂಪು ತಮಗೆ ಕಾಣ ಸಿಗೋ ಎಲ್ಲ ತೆರದ ಕೊಳುವೆ ಬಾವಿಗಳನ್ನು ಮುಚ್ಚುತ್ತಿದ್ದಾರೆ.

Comments are closed.

Social Media Auto Publish Powered By : XYZScripts.com