ಹೆಚ್‌.ವಿಶ್ವನಾಥ್‌ ನಮ್ಮ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ : ಜಿ. ಪರಮೇಶ್ವರ್‌…

ಚಿಕ್ಕಮಗಳೂರು :ಹೆಚ್‌.ವಿಶ್ವನಾಥ್‌ ನಮ್ಮ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ,  ಪಕ್ಷ ಬಿಡುವುದು ಅವರ ವೈಯಕ್ತಿಕ ವಿಚಾರವಾದರೂ, ಅವರು ನಮ್ಮ ಪಕ್ಷದಲ್ಲಿ ಇರುವುದೇ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ. ಮಾಜಿ ಸಚಿವ ಹೆಚ್‌.ವಿಶ್ವನಾಥ್‌ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಸಿರುವ ಪರಮೇಶ್ವರ್‌,  ಚುನಾವಣೆ ಸಂದರ್ಭದಲ್ಲಿ ಕೆಲವರು ಪಕ್ಷ ಬಿಡುವುದು ಮತ್ತು ಸೇರುವುದು ಸಾಮಾನ್ಯ, ಈ ನಿರ್ಧಾರದ ಬಗ್ಗೆ ಅವರು ಇನ್ನೊಂದು ಬಾರಿ ಪರಾಮರ್ಶೆ ಮಾಡಲಿ ಎಂದು ಹೇಳಿದ್ದಾರೆ.
ಇನ್ನು ದತ್ತಾತ್ರೇಯಪೀಠ ವಿವಾದದ ಬಗ್ಗೆ ಮಾತನಾಡಿ,  ಸುಪ್ರೀಂಕೋರ್ಟ್ ಅದೇಶವನ್ನ ರಾಜ್ಯಸರ್ಕಾರದ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಉಪಸಮಿತಿ ರಚನೆ ಮಾಡಿದೆ. ಉಪಸಮಿತಿ ವರದಿ ನೀಡಿದ ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ದತ್ತಪೀಠ ವಿವಾದದಲ್ಲಿ ಗೊಂದಲ ಸೃಷ್ಟಿಮಾಡುವವರು ಇದ್ದಾರೆ, ಇದೇನೂ ಹೊಸದಲ್ಲ, ಕ್ಯಾಬಿನೆಟ್ ತಿರ್ಮಾನ ಕೈಗೊಳ್ಳುವವರೆಗೂ ಕಾಯಬೇಕು ಎಂದು ಸ್ಪಷ್ಟಪಡಿಸಿದರು.

Social Media Auto Publish Powered By : XYZScripts.com