ದುಬೈ ತಲುಪಿದ ಸಿದ್ದರಾಮಯ್ಯ: ಸಿಎಂ ಸಿದ್ದರಾಮಯ್ಯರನ್ನು ಸ್ವಾಗತಿಸಿದ ದುಬೈ ಅಲ್ ಫಲಾಹ್..

ದುಬೈ ;  ದುಬೈ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬೈನ ಅಲ್ ಮಜ್ಲಿಸ್ ತಲುಪಿದ್ದು, ದುಬೈ ಅಲ್‌ ಫಲಾಹ್‌ ಗ್ರೂಪ್‌ ಅವರಿಗೆ ಸ್ವಾಗತ ನೀಡಿದೆ.  ಯುಎಇಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುಬೈ ಅಲ್ ಫಲಾಹ್ ಗ್ರೂಪ್ ವತಿಯಿಂದ ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.   ಈ ಸಂದರ್ಭ ಕರ್ನಾಟಕ ಎನ್ನಾರೈ ಫಾರಂ ಉಪಾಧ್ಯಕ್ಷರಾದ ಆರ್ತಿಕೃಷ್ಣ, ಅಲ್ ಫಲಾಹ್ ಸಿಇಓ ಫಯಾಝ್ ಉಪಸ್ಥಿತರಿದ್ದರು.⁠⁠⁠⁠
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ದುಬೈ ಪ್ರವಾಸ ಕೈಗೊಂಡಿದ್ದು,  ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ೧೦ ಗಂಟೆಗೆ ಹೊರಡುವ ವಿಮಾನದಲ್ಲಿ ಪ್ರವಾಸ ಆರಂಭಿಸಿದ್ದರು.
ಮೂರು ದಿನಗಳ ಪ್ರವಾಸಕ್ಕಾಗಿ ದುಬೈಗೆ ತೆರಳಿರುವ ಸಿದ್ದರಾಮಯ್ಯ, ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ ಉದ್ಘಾಟನೆ, ಕೈಗಾರಿಕೋದ್ಯಮಿಗಳ ಜೊತೆ ಮಾತುಕತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

One thought on “ದುಬೈ ತಲುಪಿದ ಸಿದ್ದರಾಮಯ್ಯ: ಸಿಎಂ ಸಿದ್ದರಾಮಯ್ಯರನ್ನು ಸ್ವಾಗತಿಸಿದ ದುಬೈ ಅಲ್ ಫಲಾಹ್..

  • October 20, 2017 at 11:14 PM
    Permalink

    Good post. I learn something totally new and challenging on sites I stumbleupon everyday. It will always be useful to read content from other writers and use something from other web sites. |

Comments are closed.

Social Media Auto Publish Powered By : XYZScripts.com