ಬೇಲಿಗೆ ಅಳವಡಿಸಿದ್ದ ತಂತಿಗೆ ಸಿಲುಕಿ ಸಿಲುಕಿ ಚಿರತೆ ಸೇರಿ ಮೂರು ಪ್ರಾಣಿಗಳು ದುರ್ಮರಣ….

ಚಿತ್ರದುರ್ಗ : ಬೇಟೆಗಾರರು ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ತಂತಿಗೆ ಸಿಲುಕಿ ಚಿರತೆ ಸೇರಿದಂತೆ ಮೂರು ಪ್ರಾಣಿಗಳು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಬ್ಬನಾಯಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಗಂಡು ಚಿರತೆ, ಮೂರು ವರ್ಷದ ಹೆಣ್ಣು ಕರಡಿ, ಹಾಗೂ ಚಿಪ್ಪು ಹಂದಿ ಏಕಕಾಲದಲ್ಲಿ ದುರ್ಮರಣಕ್ಕೀಡಾಗಿವೆ,

ಬೇಟೆಗಾರರು ಅಳವಡಿಸಿದ್ದ ತಂತಿಗೆ ಸಿಲುಕಿ ಕಳೆದ ಎರಡು ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿವೆ ಎನ್ನಲಾಗುತ್ತಿದೆ. ತಂತಿಬೇಲಿಗೆ ಅಳವಡಿಸಿರುವ ವಿದ್ಯುತ್ ಶಾಕ್ ನಿಂದ ಇವು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.

Social Media Auto Publish Powered By : XYZScripts.com