Beauty tips : ಅಂದಗಾತಿಯರೇ.. ಮನೆಯಲ್ಲಿಯೇ ತಯಾರಿಸಿಕೊಳ್ಳಿ.. ಹೆಲ್ದೀ ಫೇಸ್‌ಪ್ಯಾಕ್‌ ….

ಬೇಸಿಗೆಯಲ್ಲಿ ಕಾಂತಿಹೀನ ಮತ್ತು ಅಂಟುಅಂಟಾದ ಚರ್ಮದ ಸಮಸ್ಯೆ ಸಾಮಾನ್ಯ. ಬೆವರುತ್ತಿರುವ ಜಿಡ್ಡು ಜಿಡ್ಡಾದ ಮುಖದಿಂದಾಗಿ ಅಂದಗೆಡುವುದಂತೂ ಕಂಡಿತ.  ಇದಕ್ಕಾಗಿ ಪದೆ ಪದೆ ಬ್ಯೂಟಿಪಾರ್ಲರ್‌ಗಳಿಗೆ ಹೋಗುವುದಕ್ಕಿಂತ ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಫೇಸ್‌ಪ್ಯಾಕ್‌ ಹಾಕಿಕೊಂಡು ಮುಖಕ್ಕೆ ಆರೋಗ್ಯವಂತ ಕಾಂತಿ ನೀಡಬಹುದು. ವಿಶೇಷವಾಗಿ ಸುಂದರಾಂಗಿಯರಿಗಾಗಿ ಬೇಸಿಗೆಗೆ ಬೇಕಾದ ಸಿಂಪಲ್‌ ಫೇಸ್‌ಪ್ಯಾಕ್‌ಗಳನ್ನ ಪಟ್ಟಿ ಮಾಡಿದ್ದೇವೆ ನೋಡಿ.
1. ಪುದಿನಾ ಫೇಸ್‌ಪ್ಯಾಕ್‌
ಬೇಸಿಗೆಯ ಉಷ್ಣ ವಾತಾವರಣದಿಂದಾಗಿ ಬಳಲಿರುವ ಮುಖದ ಚರ್ಮಕ್ಕೆ ತಾರುಣ್ಯದ ಕಾಂತಿ ನೀಡಲು ಸಹಕರಿಸುತ್ತದೆ ಈ ಪುದಿನಾ ಫೇಸ್‌ಪ್ಯಾಕ್‌.  ಇದನ್ನ ತಯಾರಿಸಿಕೊಳ್ಳುವುದಂತೂ ಬಹಳ ಸರಳ. ಸ್ವಲ್ಪ ಪುದಿನಾ ಎಲೆಗಳನ್ನ ರುಬ್ಬಿ, ಪೇಸ್ಟ್‌ ತಯಾರಿಸಿಕೊಂಡು ಅದಕ್ಕೆ ಚಿಟಿಕೆ ಅರಿಶಿಣ ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ವಚ್ಛಗೊಳಿಸಿ.
2. ಲಿಂಬು ಫೇಸ್‌ಪ್ಯಾಕ್‌
ಬಿಸಿಲ ಅಲರ್ಜಿಯಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳಾಗಿದ್ದರೆ, ಅಥವಾ ಮೊಡವೆ ಕಲೆಗಳು ಉಳಿದುಕೊಂಡಿದ್ದರೆ ಲಿಂಬು ಫೇಸ್‌ಪ್ಯಾಕ್‌ ಅದಕ್ಕೆ ದಿವ್ಯ ಔಷಧಿ. ದಿನಕ್ಕೊಂದು ಬಾರಿ ಒಂದು ಚಮಚ ಲಿಂಬು ರಸಕ್ಕೆ ಎರಡು ಬಿಂದು ಜೇನು ಸೇರಿಸಿ ಮುಖಕ್ಕೆ ಲೇಪಿಸಿಕೊಂಡು 10 ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ದಿನನಿತ್ಯವೂ ಕ್ರಮವಾಗಿ ಲಿಂಬು ಫೇಸ್‌ಪ್ಯಾಕ್‌ ಅನುಸರಿಸಿದರೆ ಮುಖದ ಕಲೆಗಳು ಕಂಡಿತ ಮಾಯವಾಗುತ್ತವೆ.
3.. ಸವತೆಕಾಯಿಯ ಫೇಸ್‌ಪ್ಯಾಕ್‌
ಆರೋಗ್ಯವಂತ ಮುಖದ ಚರ್ಮಕ್ಕಾಗಿ ಸವತೆಕಾಯಿ ಫೇಸ್‌ಪ್ಯಾಕ್‌ ಸಹಕರಿಸುತ್ತದೆ. ಉಷ್ಣ ವಾತಾವರಣದಿಂದಾಗಿ ಡಿಹೈಡ್ರೇಟ್‌ ಆಗಿರುವ ಚರ್ಮಕ್ಕೆ ಸವತೆಕಾಯಿ ಕಾಂತಿ ನೀಡಬಲ್ಲದು. ಸವತೆಕಾಯಿಯನ್ನ ರುಬ್ಬಿ ತಯಾರಿಸಿಕೊಂಡ ಪೇಸ್ಟ್‌ಗೆ ಎರಡು ಬಿಂದು ಜೇನು ತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಇಟ್ಟು ತಣ್ಣೀರು ಬಳಸಿ ಸ್ವಚ್ಛಗೊಳಿಸಿ
4.. ಕಡಲೆಹಿಟ್ಟು ಮತ್ತು ಮೊಸರಿನ ಫೇಸ್‌ಪ್ಯಾಕ್‌
ಕಡಲೆ ಹಿಟ್ಟು ಮುಖದ ಜಿಡ್ಡನ್ನ ಹೋಗಲಾಡಿಸುತ್ತದೆ. ಮೊಸರು ಆರೋಗ್ಯವಂತ ಮಾಶ್ಚರೈಸ್‌ ಆಗಿ ಕೆಲಸ ಮಾಡುತ್ತದೆ. ಇವೆರಡನ್ನೂ ಸರಿಯಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸಿಕೊಂಡರೆ ಬೇಸಿಗೆಯ ಟ್ಯಾನ್‌ ನಿವಾರಣೆಯಾಗುವುದಲ್ಲದೆ, ಚರ್ಮಕ್ಕೆ ಹೊಳಪು ನೀಡುತ್ತದೆ. ಬಿಸಿಲಿನಿಂದ ಟ್ಯಾನ್‌ ಆಗಿರುವ ಕುತ್ತಿಗೆ, ಕೈಗಳು, ಪಾದಗಳಿಗೂ ಇದನ್ನೇ ಲೇಪಿಸಿಕೊಳ್ಳಬಹುದು.
5.. ಎಗ್‌ ಮಾಸ್ಕ್‌
ಎಗ್‌ಮಾಸ್ಕ್‌ ನಿಜಕ್ಕೂ ಮ್ಯಾಜಿಕ್‌ ಮಾಡಬಲ್ಲದು. ಕೂದಲಿಗಾಗಲಿ, ಮುಖಕ್ಕಾಗಲೇ ಎಗ್‌ ಮಾಸ್ಕ್‌ ಹಾಕಿಕೊಂಡರೆ ಬದಲಾವಣೆಯನ್ನ ಕಂಡಿತ ಗುರುತಿಸಬಹುದು.  ಮೃದುವಾದ, ಬಿಗಿಯಾದ ಮತ್ತು ಜಿಡ್ಡುರಹಿತ ಅಂದದ ಚರ್ಮಕ್ಕಾಗಿ ಎಗ್‌ಮಾಸ್ಕ್‌ ಹಾಕಿಕೊಳ್ಳಿ. ಮೊಟ್ಟೆಯ ಬಿಳಿಯ ಭಾಗವನ್ನ ಸರಿಯಾಗಿ ನಾದಿ ತಯಾರಿಸಿಕೊಂಡ ಪೇಸ್ಟ್‌ಗೆ ನಾಲ್ಕೈದು ಬಿಂದು ಲಿಂಬುರಸ ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳಿ. 20 ನಿಮಿಷ ಬಿಟ್ಟು ಮುಖವನ್ನ ತಣ್ಣೀರಿನಿಂದ ತೊಳೆದುಕೊಳ್ಳಿ. ಮೊದಲ ದಿನದಿಂದಲೇ ನೀವು ನಿಮ್ಮ ಮುಖದಲ್ಲಾದ ಬದಲಾವಣೆಯನ್ನ ಗುರುತಿಸಬಹುದು.
6. ಟೊಮ್ಯಾಟೋ ಫೇಸ್‌ಪ್ಯಾಕ್‌
ಜಿಡ್ಡು ಜಿಡ್ಡಾದ ಮತ್ತು ಕಪ್ಪು ಕಲೆಗಳಿರುವ ಮುಖಕ್ಕಾಗಿ ಟೊಮ್ಯಾಟೋ ಫೇಸ್‌ಪ್ಯಾಕ್‌ ಸಹಕಾರಿ. ಟೊಮ್ಯಾಟೋ ಪೇಸ್ಟ್‌ಗೆ ಒಂದು ಬಿಂದು ಜೇನು ಸೇರಿಸಿ ಲೇಪಿಸಿಕೊಂಡು, ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಸ್ವಚ್ಛಗೊಳಿಸಿ.
7. ಗಂಧ ಲೇಪನ
ತಣ್ಣೀರಿನಲ್ಲಿ ಶ್ರೀಗಂಧವನ್ನ ತೇಯ್ದು ಅದಕ್ಕೆ ಚಿಟಿಕೆ ಅರಿಶಿಣ ಸೇರಿಸಿ ಮುಖಕ್ಕೆ ಲೇಪಿಸಿಕೊಂಡು, 10 ನಿಮಿಷ ಇಟ್ಟು ಸ್ವಚ್ಛಗೊಳಿಸಿ. ಚರ್ಮದಲ್ಲಿರುವ ಜಿಡ್ಡಿನಾಂಶವನ್ನ ತೆಗೆಯುವುದಲ್ಲದೆ, ಚರ್ಮದ ಆರೋಗ್ಯ ಹೆಚ್ಚಿಸುತ್ತದೆ. ಇದೇ ಲೇಪನವನ್ನ ಕೈ, ಕುತ್ತಿಗೆ, ಕಾಲುಗಳಿಗೂ ಪ್ಯಾಕ್‌ಮಾಡಬಹುದು. ಚರ್ಮದ ಕಾಂತಿ ಹೆಚ್ಚಿಸುವ ದಿವ್ಯ ಔಷಧಿ ಶ್ರೀಗಂಧ.

7 thoughts on “Beauty tips : ಅಂದಗಾತಿಯರೇ.. ಮನೆಯಲ್ಲಿಯೇ ತಯಾರಿಸಿಕೊಳ್ಳಿ.. ಹೆಲ್ದೀ ಫೇಸ್‌ಪ್ಯಾಕ್‌ ….

  • October 18, 2017 at 2:11 PM
    Permalink

    What’s up to all, for the reason that I am in fact keen of reading this blog’s post to be updated daily. It carries nice material.|

  • October 18, 2017 at 3:55 PM
    Permalink

    you’re truly a just right webmaster. The website loading pace is incredible. It sort of feels that you’re doing any distinctive trick. Furthermore, The contents are masterpiece. you’ve performed a wonderful activity in this subject!|

  • October 20, 2017 at 6:10 PM
    Permalink

    Great weblog right here! Also your web site a lot up very fast! What host are you using? Can I get your associate hyperlink on your host? I desire my website loaded up as fast as yours lol|

  • October 20, 2017 at 8:35 PM
    Permalink

    Can I simply say what a comfort to discover an individual who truly understands what they’re talking about online.
    You definitely understand how to bring an issue to light and
    make it important. A lot more people ought to read this and understand this side of
    your story. It’s surprising you’re not more popular because you certainly have the gift.

  • October 21, 2017 at 12:02 AM
    Permalink

    Thank you, I have recently been searching
    for info about this subject for a long time and yours is the
    best I’ve came upon so far. But, what concerning the bottom line?
    Are you positive about the supply?

  • October 21, 2017 at 12:11 AM
    Permalink

    We stumbled over here by a different web address and thought I might check things out. I like what I see so now i am following you. Look forward to going over your web page yet again.|

Comments are closed.

Social Media Auto Publish Powered By : XYZScripts.com