ಗೂಗಲ್ ಡೂಡಲ್ ನಲ್ಲಿ ಡಾ ರಾಜ್ ಚಿತ್ರ ಬಂದಿದ್ದು ಹೇಗೆ ಗೊತ್ತಾ?

ಏಪ್ರಿಲ್ 24ರಂದು ಡಾ ರಾಜ್ಕುಮಾರ್ ಹುಟ್ಟುಹಬ್ಬವನ್ನು ಕನ್ನಡಿಗರು ದೊಡ್ಡ ಸಂಭ್ರಮದಿಂದಲೇ ಆಚರಿಸಿದ್ರು. ಅಷ್ಟು ಮಾತ್ರವಲ್ಲದೇ ವಿಶ್ವದಾದ್ಯಂತ ಈ ದಿನದ ಚರ್ಚೆಯಾಯ್ತು. ಅದಕ್ಕೆ ಕಾರಣ ಗೂಗಲ್ ನ ಡೂಡಲ್.

ಇದೇ ಮೊದಲ ಬಾರಿಗೆ ಕನ್ನಡ ನಟನೊಬ್ಬನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ವಿಭಿನ್ನ ಪ್ರಯತ್ನವನ್ನು ಗೂಗಲ್ ಮಾಡಿತ್ತು. ಗೂಗಲ್ ನ ಹೋಮ್ ಪೇಜಿನಲ್ಲಿ ಅಣ್ಣಾವ್ರ ಚಿತ್ರ ನೋಡಿ ಜಗತ್ತಿನ ವಿವಿಧ ಭಾಗಗಳಲ್ಲಿರುವ ಕನ್ನಡಿಗರು ಖುಷಿಪಟ್ರು. ಆದ್ರೆ ಗೂಗಲ್ ಡೂಡಲ್ ನಲ್ಲಿ ಡಾ ರಾಜ್ ಚಿತ್ರ ಮೂಡುವ ಹಿಂದಿನ ಶ್ರಮ ಯಾರದ್ದು ಗೊತ್ತಾ?

ಆತ ಅರವಿಂದ ಗೌಡ. ಬೆಂಗಳೂರು ಮೂಲದ ಅರವಿಂದ್ ಗೆ ಕನ್ನಡ ಚಿತ್ರರಂಗದ ಪರಿಚಯವಿದೆ. ಅವರ ಒಂದಷ್ಟು ಗೆಳೆಯರು ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದಾರೆ. ಅಲ್ಲಿ ಕನ್ನಡಿಗರು ಕೂಡಾ ಸಾಕಷ್ಟು ಜನ ಇರೋದ್ರಿಂದ ಅವರೆಲ್ಲಾ ಡಾ ರಾಜ್ ಚಿತ್ರದ ಡೂಡಲ್ ಮಾಡುವ ಸಲಹೆ ಕೊಟ್ಟರಂತೆ. ಅದರಂತೆ ಅರವಿಂದ್ ಗೌಡ ಪುನೀತ್ ರಾಜ್ಕುಮಾರ್ ನ್ನು ಸಂಪರ್ಕಿಸಿ ಈ ಬಗ್ಗೆ ಒಪ್ಪಿಗೆ ಪಡೆದಿದ್ದಾರೆ.

ನಂತರ ಡಾ ರಾಜ್ಕುಮಾರ್ ವಿವಿಧ ಪಾತ್ರಗಳ ಚಿತ್ರಗಳ ಒಂದಷ್ಟು ಸ್ಕೆಚ್ ಗಳನ್ನು ಮಾಡಲಾಯಿತು. ಅವುಗಳಲ್ಲಿ ಒಂದನ್ನು ಎಲ್ಲರೂ ಒಪ್ಪಿ ಏಪ್ರಿಲ್ 24ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಯಿತು. ಕನ್ನಡಿಗರ ಕಣ್ಮಣಿ ಡಾ ರಾಜ್ ರನ್ನು ಪ್ರಪಂಚದಾದ್ಯಂತ ಮತ್ತೊಮ್ಮೆ ವಿನೂತನವಾಗಿ ಪರಿಚಯಿಸಲು ಅರವಿಂದ್ ಗೌಡ ಮತ್ತು ಸ್ನೇಹಿತರು ಕಾರಣರಾದ್ರು.

 

Comments are closed.

Social Media Auto Publish Powered By : XYZScripts.com