ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯ : ಕರ್ನಾಟಕ ಸರ್ಕಾರ…

ಬೆಂಗಳೂರು :  ಕಾಯಕಯೋಗಿ ಬಸವಣ್ಣನ ಭಾವಚಿತ್ರವನ್ನ ಕರ್ನಾಟಕದ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಬುಧವಾರ ಕರ್ನಾಟಕ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.  ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ‘ಕಾಯಕವೇ ಕೈಲಾಸ’ ಎಂದು ನಾಡಿಗೆ ಸಾರಿರುವ ಬಸವಣ್ಣನ ಚಿತ್ರ ಸರಕಾರಿ ಕಚೇರಿಯಲ್ಲಿ ಗಮನ ಸೆಳೆಯಲಿದೆ.
ಇದೇ ಏಪ್ರಿಲ್‌ 24ರಂದು ಈ ವಿಷಯದ ವಿಷಯದ ಕುರಿತು, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದ್ದು, ಮಹಾರಾಷ್ಟ್ರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಬಸವೇಶ್ವರರ ಭಾವಚಿತ್ರ ಕಡ್ಡಾಯವಾಗಿ ಹಾಕಲಾಗಿದೆ, ಆದರೆ ಬಸವೇಶ್ವರರ ನಾಡಾದ ನಮ್ಮ ನೆಲದಲ್ಲೇ ಬಸವೇಶ್ವರರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಇಲ್ಲ, ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿಯೂ ಬಸವೇಶ್ವವರರ ಭಾವಚಿತ್ರ ಕಡ್ಡಾಯಗೊಳಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದ್ದರು. ಸ್ವಾಮೀಜಿ ಸಲಹೆ ನೀಡಿ ಎರಡೇ ಎರಡು ದಿನಕ್ಕೆ, ಕರ್ನಾಟಕ ಸರ್ಕಾರ, ಬಸವಣ್ಣನ ಭಾವಚಿತ್ರವನ್ನ ಸರ್ಕಾರಿ ಕಚೇರಿಯಲ್ಲಿ ಅಳವಡಿಸಲು ನಿರ್ಧಾರ ಕೈಗೊಂಡಿರುವುದು ಜನರಲ್ಲಿ ಅಚ್ಚರಿ ತಂದಿದೆ.

Comments are closed.

Social Media Auto Publish Powered By : XYZScripts.com