ಲಕ್ಕಿ ಗರ್ಲ್ 14 ವರ್ಷಗಳ ಸಿನಿ ಕರಿಯರ್ ಗೆ ಕಿಚ್ಚ ಹೇಳಿದ್ದೇನು ?

ಇಂದಿಗೆ ಸರಿಸುಮಾರು 14 ವರ್ಷಗಳ ಹಿಂದೆ ರಮ್ಯ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಮಗ ಪುನೀತ್ ಗಾಗಿ ಅಭಿ ಸಿನಿಮಾ ನಿರ್ಮಾಣ ಮಾಡೋಕೆ  ನಿರ್ಧರಿಸಿದ್ರು. ಆಗ ತಾನೇ ನಾಯಕನಾಗಿ ತೆರೆಕಂಡ ಚೊಚ್ಚಲ ಚಿತ್ರ ಅಪ್ಪು ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ಎರಡನೇ ಚಿತ್ರ ಅಭಿ ಕೂಡ ಗಳಿಕೆಯಲ್ಲಿ ಅದರಷ್ಟೇ ಸೌಂಡ್ ಮಾಡೋಕೆ ಶುರುಮಾಡಿತ್ತು. ಈ ಗದ್ದಲದಲ್ಲೂ ಪ್ರೇಕ್ಷಕರ ಗಮನ ಸೆಳೆದಿದ್ದು ಮೋಹಕ ತಾರೆ ರಮ್ಯ.

ಅಸಲಿಗೆ ಅಪ್ಪು ಚಿತ್ರಕ್ಕೇ ರಮ್ಯ ನಾಯಕಿಯಾಗ್ಬೇಕಿತ್ತು ಅನ್ನೋ ಮಾತನ್ನ ಇಂದಿಗೂ ಗಾಂಧಿನಗರ ಹೇಳುತ್ತೆ. ಇದೇ ಕಾರಣಕ್ಕೆ ರಮ್ಯ ಹಾಗು ರಕ್ಷಿತಾ ನಡುವೆ ಕೋಲ್ಡ್ ವಾರ್ ಇದ್ದಿದ್ದನ್ನ ಇಂದಿಗೂ ನೆನಪಿಸಿಕೊಳ್ಳುವವರಿದ್ದಾರೆ. ಆದ್ರೂ ಇವೆಲ್ಲವನ್ನೂ ಹೊರತು ಪಡಿಸಿದ್ರೆ, ರಮ್ಯ ಸಿನಿಮಾ ಪಯಣ ಯಾವಾಗ್ಲೂ ನಂಬರ್ ಒನ್ ಸ್ಥಾನದಲ್ಲೇ ಇತ್ತು.

ಎಕ್ಸ್ ಕ್ಯೂಸ್ ಮೀ, ಆಕಾಶ್, ಅರಸು, ಗೌರಮ್ಮ, ಅಮೃತಧಾರೆ, ಸಿದ್ಲಿಂಗು ಅಂತಹ ಸಿನಿಮಾಗಳು ಇವರ ಕರಿಯರ್ ಗೆ ಬೂಸ್ಟ್ ಕೊಟ್ಟಿವೆ. ಸತತ ಹತ್ತು ವರ್ಷಗಳ ಕಾಲ ಕನ್ನಡಚಿತ್ರರಂಗದ ನಂಬರ್ ಒನ್ ನಟಿಯಾಗಿದ್ದು ಇವರ ಸಾಧನೆ. ಇದ್ರೊಂದಿಗೆ ತಮಿಳು ಚಿತ್ರರಂಗದಲ್ಲೂ ಅಲ್ಪ ಪ್ರಮಾಣದ ಯಶಸ್ಸು ಪಡೆದುಕೊಂಡು ಮತ್ತೆ ಕನ್ನಡಕ್ಕೆ ಮರಳಿದ್ರು.

ಒಟ್ಟು ಈ 14 ವರ್ಷಗಳ ಈ ಸುದೀರ್ಘ ಜರ್ನಿಯಲ್ಲಿ ಲಕ್ಕಿ ಗರ್ಲ್ ಅಂತ ಅನಿಸಿಕೊಂಡ ನಟಿ, ಆಗಾಗ ಕಾಂಟ್ರವರ್ಸಿ ಕ್ವೀನ್ ಆಗಿದ್ದೂ ಇದೆ. ನೀರ್ ದೋಸೆ ತಂಡದೊಂದಿಗೆ ಕಿರಿಕ್ ಮಾಡಿಕೊಂಡಿದ್ದು, ದಂಡಂ ದಶಗುಣಂ ನಿರ್ಮಾಪಕ ಎ.ಗಣೇಶ್ ರೊಂದಿಗೆ ಕಿತ್ತಾಟ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಇದ್ರೊಂದಿಗೆ ನೃತ್ಯ ನಿರ್ದೇಶಕ ಹರ್ಷ ಜೊತೆನೂ ಗಲಾಟೆ ಮಾಡಿಕೊಂಡು ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ರು. ಆನಂತ್ರ ಮತ್ತೆ ಒಂದಾಗಿದ್ದ ಜೋಡಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಹೀಗಾಗಿ ರಮ್ಯ ಅವರ 14 ವರ್ಷಗಳ ಈ ಸುಂದರ ಪಯಣಕ್ಕೆ ಕಿಚ್ಚ ವಿಶ್ ಮಾಡೋದನ್ನ ಮರೆಯಲಿಲ್ಲ.

 

 

 

One thought on “ಲಕ್ಕಿ ಗರ್ಲ್ 14 ವರ್ಷಗಳ ಸಿನಿ ಕರಿಯರ್ ಗೆ ಕಿಚ್ಚ ಹೇಳಿದ್ದೇನು ?

  • October 25, 2017 at 10:11 AM
    Permalink

    I take pleasure in, lead to I discovered just what I was looking for. You’ve ended my four day long hunt! God Bless you man. Have a great day. Bye

Comments are closed.