Koppal : ಸಾಲದ ಶೂಲಕ್ಕೆ ರೈತ ಬಲಿ : ಆತ್ಮಹತ್ಯೆಗೆ ಶರಣಾದ ಕೊಪ್ಪಳದ ರೈತ …

ಕೊಪ್ಪಳ:  ರಾಜ್ಯಾದ್ಯಂತ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ದುರಾದೃಷ್ಟಕರ ಘಟನೆ ಮುಂದುವರೆಯುತ್ತಲೇ ಇದ್ದು, ಬುಧವಾರ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನ ಹೆಸರು ಯಲ್ಲಪ್ಪ ದೇವರಮನಿ (35) ಎಂದಾಗಿದ್ದು, ಸಾಲಬಾಧೆಯೇ ಈತನ ಸಾವಿಗೆ ಕಾರಣ ಎನ್ನಲಾಗಿದೆ.
ಪ್ರಗತಿ ಗ್ರಾಮೀಣ ಬ್ಯಾಂಕ್‌‌ನಲ್ಲಿ 30 ಸಾವಿರ ಹಾಗೂ ಕೈಗಡ ಸಾಲವಾಗಿ 1.7 ಲಕ್ಷ ಸಾಲ ಮಾಡಿಕೊಂಡಿದ್ದ ಯಲ್ಲಪ್ಪ, ಸಾಲ ತೀರಿಸುವ ಮಾರ್ಗ ಕಾಣದೆ ಸಾವಿಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದು, ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Social Media Auto Publish Powered By : XYZScripts.com