ಬಾಬಾ ರಾಮ್ ದೇವ್ ಅಪಘಾತದಲ್ಲಿ ನಿಧನ: ಈ ಸುದ್ದಿ ನಿಜವೇ…?

ನಿನ್ನೆಯಿಂದ್ಲೂ ಯೋಗಗುರು ಬಾಬಾ ರಾಮ್ ದೇವ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಪೂನಾ ಹಾಗು ಮುಂಬೈ ಹೈ ವೇ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ರಾಮ್ ದೇವ್ ಅವ್ರೊಂದಿಗೆ ಸಂಚರಿಸುತ್ತಿದ್ದ ಇನ್ನೂ ನಾಲ್ಕು ಮಂದಿ ಅಸುನೀಗಿದ್ದಾರೆ ಅನ್ನುವ ಶಾಕಿಂಗ್ ನ್ಯೂಸ್ ಎಲ್ಲೆಡೆ ಹರಿದಾಡುತ್ತಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಯೋಗಾ ಗುರುವಿನ ಅಪಾರ ಅಭಿಮಾನಿ ಬಳಗ ತಲೆಕೆಡಿಸಿಕೊಂಡಿತ್ತು. ಯೋಗಾ, ಆಯುರ್ವೇಧ, ವ್ಯಾಪಾರ, ವ್ಯವಸಾಯ ಹಾಗು ರಾಜಕೀಯದಲ್ಲೂ ಹೆಸರು ಮಾಡಿರುವ ರಾಮ್ ದೇವ್ ಹಠಾತ್ ನಿಧನ ಇವರ ಹಿಂಬಾಲಕರಿಗೆ  ನಿದ್ದೆ ಕಡೆಸಿತ್ತು. ಅಲ್ಲದೆ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದ್ದ ಫೋಟೋಗಳು ಕೂಡ ಪತಾಂಜಲಿ ಮಾಲೀಕನ ಅಪಘಾತದ ಸುದ್ದಿಗೆ ಪುಷ್ಠಿ ನೀಡಿದ್ವು.

ಆದ್ರೆ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಓಡಾಡ್ತಿರೋ ರಾಮ್ ದೇವ್ ಅಪಘಾತದ ಫೋಟೋಗಳು ನಿನ್ನೆಯದಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಆ್ಯಕ್ಸಿಡೆಂಟ್ ನಲ್ಲಿ ಸತ್ತಿರುವ ವಿಷಯ ಕೂಡ ಸುಳ್ಳು ಎಂದು ಧೃಡಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ವತ: ರಾಮ್ ದೇವ್ ಅವ್ರೇ ತಾನು ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಹರಿದಾಡುತ್ತಿರುವ ಫೋಟೋಗಳ ಬಗೆಗಿನ ಗೊಂದಲಕ್ಕೂ ತೆರೆಬಿದ್ದಿದೆ. 2011ರಲ್ಲಿ ಅಪಘಾತಕ್ಕೆ ಸಿಲುಕಿದ್ದ ಫೋಟೋಗಳಾಗಿದ್ದು, ನಿನ್ನೆ ಅಪಘಾತ ಸಂಭವಿಸಿಲ್ಲ ಎಂದು ಪೂನಾ-ಮುಂಬೈ ಹೈವೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com