ಅಯ್ಯೋ!! ಅಪಾರ್ಥ ಮಾಡ್ಕೋಬೇಡಿ..ಭಾರತೀಯರಿಗೆ ಸ್ನ್ಯಾಪ್‌ಡೀಲ್ ಮನವಿ!!

ಹೌದು. ಸ್ನ್ಯಾಪ್ಚ್ಯಾಟ್ ಬಹಿಷ್ಕರಿಸಲು ಹೋಗಿ ಖ್ಯಾತ ಅಂತರ್ಜಾಲ ಶಾಪಿಂಗ್ ಜಾಲತಾಣ ಸ್ನ್ಯಾಪ್ಡೀಲ್‌ಗೆ ಹೆಚ್ಚು ಜನರು ಬಹಿಷ್ಕಾರ ಹಾಕಿದ್ದಾರೆ ನಮ್ಮ ಭಾರತೀಯರು.!!
ಭಾರತದಂತಹ ಬಡದೇಶದಲ್ಲಿ ನನ್ನ ಸಾಮ್ರಾಜ್ಯ ವಿಸ್ತರಿಸಲು ನನಗೆ ಇಷ್ಟವಿಲ್ಲ ಎಂದು ಸ್ನ್ಯಾಪ್ಚ್ಯಾಟ್ ಆಪ್ ಸಿಇಒ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಲು ಹೋಗಿ ಹೆಚ್ಚು ಭಾರತೀಯರು ದೊಡ್ಡ ಎಡವಟ್ಟು ಮಾಡಿದ್ದಾರೆ.!! ಸ್ನ್ಯಾಪ್ಚ್ಯಾಟ್ ಆಪ್ ಸಂಸ್ಥೆಯ ಸಿಇಒ ಇವಾನ್ ಸ್ಪೀಗೆಲ್ ಭಾರತದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಸ್ನ್ಯಾಪ್ಚ್ಯಾಟ್ ಬಹಿಷ್ಕರಿಸಿ ಎಂಬ ಕ್ಯಾಂಪೇನ್ ಭಾರತದಲ್ಲಿ ಆರಂಭವಾಗಿತ್ತು. ಇದಕ್ಕೆ ಜನರು ಸ್ಪಂದಿಸಿ ಸ್ನ್ಯಾಪ್ಚ್ಯಾಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ಸ್ನ್ಯಾಪ್ಚ್ಯಾಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಕೆಲವರು ಸ್ನ್ಯಾಪ್‌ಡೀಲ್ ಆನ್‌ಲೈನ್ ಸಂಸ್ಥೆಯನ್ನು ಬಹಿಷ್ಕರಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ಈಗಾಗಲೇ ಲಕ್ಷಾಂತರ ಜನರು ಸ್ನ್ಯಾಪ್‌ಡೀಲ್ ಆಪ್‌ ಅನ್ನು ಅನ್‌ಇಸ್ಟಾಲ್ ಮಾಡಿದ್ದು, ಸ್ನ್ಯಾಪ್‌ಡೀಲ್ ಸಂಸ್ಥೆಗೆ ದೊಡ್ಡ ತಲೆನೋವಾಗಿದೆ.!! ಈ ಬಗ್ಗೆ ಸ್ನ್ಯಾಪ್‌ಡೀಲ್ ಮಾಹಿತಿ ನೀಡಿದ್ದು, ಜನರು ಸ್ನ್ಯಾಪ್‌ಡೀಲ್ ಬಗ್ಗೆ ಅಪಾರ್ಥ ತಿಳಿಯಬೇಡಿ ಎಂದು ಮನವಿ ಮಾಡಿದ್ದಾರೆ.!!ಇನ್ನು ಈ ಹಿಂದೆ ಸ್ನ್ಯಾಪ್‌ಡೀಲ್ ಬ್ರಾಂಡ್ ರಾಯಭಾರಿಯಾಗಿದ್ದ ಅಮೀರ್ ಖಾನ್ ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿದ್ದಾಗಲೂಸ್ನ್ಯಾಪ್‌ಡೀಲ್ ಸಂಸ್ಥೆ ಭಾರಿ ವಿರೋಧ ಎದುರಿಸಿತ್ತು. ಹಾಗೆಯೇ, ಇದೀಗ ತನ್ನದಲ್ಲದ ತಪ್ಪಿಗೆ ಮತ್ತೆ ಸ್ನ್ಯಾಪ್‌ಡೀಲ್ ಶಿಕ್ಷೆ ಎದುರಿಸುವಂತಾಗಿದೆ.!!

Comments are closed.