ಹೆಚ್‌ಡಿಡಿ, ಸಿದ್ದರಾಮಯ್ಯ ತಮ್ಮ ಸ್ನೇಹದಿಂದ ಪರಮೇಶ್ವರ್‌ಗೆ ಎಚ್ಚರಿಕೆ ನೀಡಿದ್ದಾರೆ : ಗೋ ಮಧುಸೂಧನ್‌

ಬೆಂಗಳೂರು: ಶ್ರವಣಬೆಳಗೋಳದಲ್ಲಿ ಸಿ.ಎಂ ಸಿದ್ದರಾಮಯ್ಯ ಮತ್ತು ಹೆಚ್ ಡಿ ದೇವೆಗೌಡರು ವೇದಿಕೆ ಹಂಚಿಕೊಂಡ ವಿಚಾರದ ಕುರಿತು ಮಾತನಾಡಿದ ಗೋ.ಮಧುಸೂಧನ್‌, ನಮ್ಮ ಪಕ್ಷ ಬೇರೆ ಬೇರೆ ಆದ್ರೂ ನಾವಿಬ್ರು ಒಂದೇ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ. ಮಂಗಳವಾರ ಬೆಂಗಳೂರಿನ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಹೇಳಿಕೆ ನೀಡಿದ ಅವರು,   ತಮ್ಮ ಸ್ನೇಹವನ್ನ ವ್ಯಕ್ತಪಡಿಸುವ ಮೂಲಕ, ಸಿದ್ದರಾಮಯ್ಯ ತಮ್ಮ ಪಕ್ಕದಲ್ಲೆ ಇದ್ದ ಪರಮೇಶ್ವರ್‌ಗೂ ಸಂದೇಶ ತಲುಪಿಸಿದ್ದಾರೆ, ದಲಿತ ಸಿ.ಎಂ ಆಗಬೇಕು ಅಂತ ಹೊರಟರೆ ದೇವೆಗೌಡರು‌ ನನ್ನ ಪರ ಇದ್ದಾರೆ ಎನ್ನುವ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ಪರಮೇಶ್ವರ್‌ಗೆ ಎಚ್ಚರಿಕೆ ನೀಡಿದ್ದಲ್ಲದೆ, ನಾವಿಬ್ಬರು ಒಂದಾಗಿದ್ದೇವೆ ಎಂದು ಬಿಜೆಪಿಗೂ ಎಚ್ಚರಿಕೆ ಕೊಟ್ಟಿದ್ದಾರೆ, ಆದರೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಷ್ಚಿತ, ಕಾಂಗ್ರೆಸ್ – ಜೆಡಿಎಸ್ ಒಂದಾರದೂ ಸರಿ, ಬಿಜೆಪಿ ಮಿಷನ್ 150 ಅಲ್ಲ 175 ಸೀಟು ಗೆಲ್ತೀವಿ ನೋಡ್ತಿರಿ ಎಂದು ಗೋ.ಮಧುಸೂಧನ್‌ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.  ಸಿದ್ದರಾಮಯ್ಯ ಮತ್ತು ದೇವೇಗೌಡರ  ಒಳ ದೋಸ್ತಿಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ, ಈ ಸಂಬಂಧ ಮಿಷನ್ 150 ಬದಲು ಮಿಷನ್ 170 ಗುರಿಯತ್ತ ತಾವು  ಹೊರಡುತ್ತೇವೆ ಎಂದು ಮಧುಸೂಧನ್ ಹೇಳಿದ್ದಾರೆ.

Comments are closed.