ಮದ್ವೆ ಆದ್ಮೇಲೆ ಅಡುಗೆ ಮಾಡೋದು ಸಮಂತಾ ಅಲ್ಲ, ನಾಗಚೈತನ್ಯ!

ಟಾಲಿವುಡ್ ಹಾಟ್ ಪೇರ್ ನಾಗಚೈತನ್ಯ, ಸಮಂತಾ ಎಂಗೇಜ್ಮೆಂಟ್ ಅದ್ದೂರಿಯಾಗಿ ನೆರವೇರಿದ್ದು ಎಲ್ಲರಿಗೂ ಗೊತ್ತಿದೆ. ಅಕ್ಟೋಬರ್ನಲ್ಲಿ ಇವರಿಬ್ಬರ ಮದ್ವೆಗೆ ತಯಾರಿ ಕೂಡ ಜೋರಾಗಿ ನಡೀತಿದೆ. ಕಳೆದ 7ವರ್ಷಗಳಿಂದ ಈ ಜೋಡಿ ಗುಟ್ಟಾಗಿ ಪ್ರೀತಿಲಿ ಮುಳುಗಿತ್ತು. ಇತ್ತೀಚೆಗಷ್ಟೆ ಪೋಷಕರ ಒಪ್ಪಿಗೆ ಪಡೆದು ಉಂಗುರ ಬದಲಿಸಿಕೊಂಡಿತ್ತು. ಸದ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ, ಈ ಜೋಡಿ ಸಮಯ ಸಿಕ್ಕಾಗಲೆಲ್ಲಾ ಫ್ರೆಂಡ್ಸ್ ಜೊತೆ ಸೇರಿ ಪಾರ್ಟಿ ಮಾಡಿ ಎಂಜಾಯ್ ಮಾಡ್ತಿರ್ತಾರೆ ಅನ್ನೋದು ಈ ಫೋಟೊಗಳನ್ನ ನೋಡಿದ್ರೆ ಅರ್ಥವಾಗುತ್ತೆ.

ಈ ಪಾರ್ಟಿ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಫೋಟೊಗಳಲ್ಲಿ ಪಾರ್ಟಿಗೆ ಸ್ನಾಕ್ಸ್ ಪ್ರಿಪೇರ್ ಮಾಡ್ತಿರೋ ನಾಗಚೈತನ್ಯನನನ್ನ ನೋಡ್ಬೋದು. ಇನ್ನೂ ಚೈತು ಸ್ನಾಕ್ಸ್ ಪ್ರಿಪೇರ್ ಮಾಡ್ತಿದ್ರೆ, ಪಕ್ಕದಲ್ಲೇ ಸಮಂತ ಆತನಿಗೆ ಹೆಲ್ಪ್ ಮಾಡ್ತಿರೋದು ಕಾಣ್ಸುತ್ತೆ. ಈ ಫೋಟೊಗಳನ್ನ ಗಮನಿಸಿದ್ರೆ ಇಬ್ಬರ ನಡುವೆ ಅಂಡರ್ಸ್ಟ್ಯಾಂಡಿಂಗ್ ಹೇಗಿದೆ ಅಂತ ಗೊತ್ತಾಗುತ್ತೆ. ಆದ್ರೆ ಈ ಫೋಟೋಸ್ ನೋಡಿದವರೆಲ್ಲಾ, ಯಾಕೆ ಚೈತು ಅಡುಗೆ ಮಾಡ್ತಿದ್ದಾನೆ..? ಸಮಂತಾಗೆ ಕುಕ್ಕಿಂಗ್ ಬರಲ್ವಾ…? ಪಾಪ ಮದ್ವೆ ಆದ್ಮೇಲೆ ಕಿಚನ್ ಡಿಪಾರ್ಟಮೆಂಟ್ ಚೈತೂದಾ..? ಸಮಂತಾಳದ್ದಾ..? ಅಂತ ತಮಾಷೆ ಮಾಡ್ತಿದ್ದಾರೆ.

ಕೆಲವರು ನಾಗ ಚೈತನ್ಯ ಅಡುಗೆ ಮಾಡಿದ್ರೆ ಏನ್ ತಪ್ಪು..? ಅವ್ನು ತನ್ನ ಭಾವಿ ಪತ್ನಿಯನ್ನ ಇಂಪ್ರೆಸ್ ಮಾಡೋಕೆ ಇಷ್ಟೆಲ್ಲಾ ಸರ್ಕಸ್ ಮಾಡ್ತಿದ್ದಾನೆ ಅಷ್ಟೆ, ಇಷ್ಟಕ್ಕೆ ಸಮಂತಾಳಿಗೆ ಅಡುಗೆ ಮಾಡೋಕೆ ಬರಲ್ಲಾ, ಮದ್ವೆ ಆದ್ಮೇಲೂ ನಾಗಚೈತನ್ಯ ಅಡುಗೆ ಮಾಡಿ ಬಡಿಸ್ಬೇಕು ಅಂತ ಅಂದುಕೊಂಡ್ರೆ ಹೆಂಗೆ ಅಂತ ಚೈತು, ಸ್ಯಾಮ್ ಬೆನ್ನಿಗೆ ನಿಂತಿದ್ದಾರೆ. ಅದೆಲ್ಲಾ ಏನೇ ಇದ್ರೂ, ಈ ಜೋಡಿ ಹೀಗೆ ಜೊತೆಯಾಗಿ ನೂರ್ಕಾಲ ಬಾಳಲಿ ಅಂತಿದ್ದಾರೆ.

Comments are closed.

Social Media Auto Publish Powered By : XYZScripts.com